Webdunia - Bharat's app for daily news and videos

Install App

ಗಳಿಕೆಯ ಹಾದಿಯಲ್ಲಿ ಕೃಷ್ಣ ಲೀಲಾ...?!

Webdunia
ಸೋಮವಾರ, 30 ಮಾರ್ಚ್ 2015 (09:54 IST)
ಶಶಾಂಕ್ ನಿರ್ದೇಶನದ ಅಜಯ್ ಕೃಷ್ಣ ರಾವ್ ಅವರ ಹೋಂ ಪ್ರೊಡಕ್ಷನ್ ಮತ್ತು ಅವರ ಅಭಿನಯದ ಚಿತ್ರ ಕೃಷ್ಣ ಲೀಲಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಬಾಕ್ಸಾಫೀಸಲ್ಲಿ ಗದ್ದಲ ಮಾಡುತ್ತಿರುವ ಈ ಚಿತ್ರ ಕಳೆದವಾರ ಇಡಿ ಕರ್ನಾಟಕದಲ್ಲಿ ಉತ್ತಮ ಗಳಿಕೆ ಮಾಡಿ ಪರಭಾಷೆಯ ಚಿತ್ರಗಳಿಗಿಂತ ಮುಂದಿತ್ತು.
ಈ ಚಿತ್ರ ಆರಂಭದಲ್ಲಿ 135 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದು ಯುಗಾದಿ ಹಬ್ಬದ  ಮುನ್ನಾದಿನ ಬಿಡುಗಡೆ ಆಗಿತ್ತು. ಆಗ ವಿಶ್ವ ಕಪ್ ಬಿಸಿ ಮತ್ತು ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅನುಮಾಸ್ಪದ ಸಾವಿನ ಗಲಾಟೆ ಎಲ್ಲವು ಒಂದು ಬಗೆಯ ಕ್ರಿಟಿಕಲ್ ವಾತಾವರಣ ಉಂಟು ಮಾಡಿತ್ತು. ಆದರೆ ಅವೆಲ್ಲದರ ನಡುವೆಯೂ ಅಜಯ್ ಚಿತ್ರ ಗೆದ್ದಿದೆ. ಆರಂಭಿಕ ವಾರದಲ್ಲಿ ಈ ಚಿತ್ರ 3.5 ಕೋಟಿಗಳಷ್ಟು ಗಳಿಕೆಯನ್ನು  ಮೊದಲ ವಾರದಲ್ಲಿ ಮಾಡಿತ್ತು.
 
ಇದು ಅತ್ಯುತ್ತಮ ಗಳಿಕೆ ಎನ್ನುವ ಮಾತನ್ನು ಬಾಕ್ಸಾಫೀಸ್ ಮಂದಿ ಹೇಳಿದ್ದಾರೆ. ಆದರೆ ಕಳೆದ ವಾರ ಈ ಚಿತ್ರವೂ ಉಳಿದ ಭಾಷೆಯ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿದೆ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರವೂ ಆಮೀರ್ ಹಾಂ ಪೀಕೆ ಚಿತ್ರವನ್ನು ಹಿಂದಿಕ್ಕಿತ್ತು. ಅದೇ ರೀತಿ ಈಗ ಕೃಷ್ಣಲೀಲಾ ಬೇರೆ ಭಾಷೆಯ ಚಿತ್ರಗಳನ್ನು ಹಿಂದಿಕ್ಕಿದೆ. ಈಗ ಕರ್ನಾಟಕ ದಾದ್ಯಂತ ಒಟ್ಟು 160 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಯಶಸ್ಸಿನ ಹಾದಿ ಮತ್ತಷ್ಟು ವಿಸ್ತಾರ ಮಾಡಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments