Select Your Language

Notifications

webdunia
webdunia
webdunia
webdunia

ರಿಷಿ ಕಪೂರ್ ನನಗೆ ತಂದೆಯ ಸಮಾನ: ಅಭಿಷೇಕ್ ಬಚ್ಚನ್

ರಿಷಿ ಕಪೂರ್ ನನಗೆ ತಂದೆಯ ಸಮಾನ: ಅಭಿಷೇಕ್ ಬಚ್ಚನ್
, ಬುಧವಾರ, 5 ಆಗಸ್ಟ್ 2015 (10:00 IST)
ಹಿರಿಯ ನಟ ರಿಷಿ ಕಪೂರ್ ಹಾಗೂ ಅಭಿಷೇಕ್ ಬಚ್ಚನ್ ಆಲ್ ಈಸ್ ವೆಲ್ ಅನ್ನೋ ಸಿನಿಮಾದಲ್ಲಿ ಜೊತೆಯಾಗಿ ನಟ್ತಿಸ್ತಾ ಇರೋದು ಎಲ್ಲರಿಗೂ ಗೊತ್ತೇ ಇರುವ ವಿಚಾರ. ಈಗಾಗಲೇ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಅತೀ ಶೀಘ್ರದಲ್ಲಿ ಸಿನಿಮಾ ನಿಮ್ಮ ಮುಂದೆ ಬರಲಿದೆ.
ಇನ್ನು ಸಿನಿಮಾದಲ್ಲಿ ರಿಷಿ ಕಪೂರ್ ಜೊತೆ ನಟಿಸುತ್ತಿರುವ ಬಗ್ಗೆ ಹೇಳಿರುವ ಅಭಿಷೇಕ್ ನನಗೆ ರಿಷಿ ಕಪೂರ್ ಅಂದ್ರೆ ತುಂಬಾನೇ ಇಷ್ಟ. ನಾನು ಅವರ ಬಿಗ್ ಫ್ಯಾನ್ ಎಂದಿದ್ದಾರೆ. ನನ್ನ ಅವರ ಬಾಂಧವ್ಯವನ್ನು ನಾನು ಕ್ಯಾಮೆರಾ ಮುಂದೆ ತೋರಿಸಲು ಸಾಧ್ಯವಿಲ್ಲ. ಆದ್ರೆ ನಮ್ಮ ನಡುವೆ ಅಷ್ಟೊಂದು ಸುಂದರವಾದ ಬಾಂಧವ್ಯವಿದೆ ಎಂದಿದ್ದಾರೆ. ಅಲ್ಲದೇ ಅವರು ನನಗೆ ತಂದೆಯಿದ್ದಂತೆ ಎಂದಿದ್ದಾರೆ. ಆದ್ರೆ ಸಿನಿಮಾದಲ್ಲಿ ನಾನು ನಿಜ ಜೀವನದಲ್ಲಿ ರಿಷಿ ಕಪೂರ್ ಅವರನ್ನು ಎಷ್ಟು ಪ್ರೀತಿಸುತ್ತೇನೋ  ಅದಕ್ಕೆ ವಿರುದ್ಧವಾದ ಪಾತ್ರ ಎಂದಿದ್ದಾರೆ.
 
ಸಿನಿಮಾದಲ್ಲಿ ರಿಷಿ ಕಪೂರ್ ಅಭಿಷೇಕ್ ಬಚ್ಚನ್ ತಂದೆಯಾಗಿ ಕಾಣಿಸಿಕೊಂಡಿದ್ರೆ, ಸುಪ್ರೀಯಾ ಪಾಠಕ್ ತಾಯಿಯ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಆಸಿನ್ ಅಭಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು , ಭೂಷಣ್ ಕುಮಾರ್ ಸಿನಿಮಾವನ್ನು ನಿರ್ಮಿಸಿದ್ದಾರೆ. ಆಲ್ ಈಸ್ ವೆಲ್ ಸಿನಿಮಾ ಆಗಸ್ಟ್ 21 ರಂದು ಪ್ರೇಕ್ಷರೆದುರಿಗೆ ಪ್ರತ್ಯಕ್ಷವಾಗಲಿದೆ.

Share this Story:

Follow Webdunia kannada