Webdunia - Bharat's app for daily news and videos

Install App

ಸೈರಾಟ್ ರಿಮೇಕ್ ಚಿತ್ರೀಕರಣ ಸುರು, ಕನ್ನಡದಲ್ಲೂ ರಿಂಕುನೇ ನಾಯಕಿ

Webdunia
ಶನಿವಾರ, 8 ಅಕ್ಟೋಬರ್ 2016 (12:28 IST)
ಮರಾಠಿಯ ಬ್ಲಾಕ್ ಬಸ್ಟರ್ ಸಿನಿಮಾ ಸೈರಾಟ್ ಕನ್ನಡದಲ್ಲಿ ರಿಮೇಕ್ ಆಗುತ್ತಿರುವ ಸಂಗತಿ ನಿಮಗೆಲ್ಲ ಗೊತ್ತಿರಲಿಕ್ಕೆ ಸಾಕು. ಕನ್ನಡ ಅವತರಣಿಕೆಯಲ್ಲಿ ಸಹ ಮೂಲ ಸಿನಿಮಾದ ನಾಯಕಿ ರಿಂಕು ನಟಿಸುತ್ತಿರುವುದು ಈ ಸಿನಿಮಾದ ವಿಶೇಷ. ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ಖಳನಟ ಸತ್ಯ ಪ್ರಕಾಶ್ ಪುತ್ರ ರಿಂಕು ರಾಜಗುರು ಸಾಥ್ ನೀಡಲಿದ್ದು ಈ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾನೆ.
ಎಸ್. ನಾರಾಯಣ್ ನಿರ್ದೇಶಿಸುತ್ತಿರುವ, ಇನ್ನು ಹೆಸರಿಡದ ಈ ಸಿನಿಮಾದ ಮಹೂರ್ತ ಕಳೆದೆರಡು ದಿನಗಳ ಹಿಂದೆ ನಾಯಕ-ನಾಯಕಿ ಉಪಸ್ಥಿತಿಯಲ್ಲಿ ಗುರುವಾರ ನೆರವೇರಿತು. ಇತ್ತೀಚಿಗೆ ಇಬ್ಬರು ಫೋಟೋಶೂಟ್‌ನಲ್ಲಿ ಕೂಡ ಪಾಲ್ಗೊಂಡಿದ್ದರು.
 
ಈ ಸುದ್ದಿಯನ್ನು ದೃಢೀಕರಿಸಿರುವ ಎಸ್. ನಾರಾಯಣ್, ಗುರುವಾರ ನವರಾತ್ರಿ ಶುಭ ಮಹೂರ್ತದಲ್ಲಿ ನೆರವೇರಿದೆ. ಸದ್ಯ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಮುಂದಿನ ಸೆಡ್ಯೂಲ್ ದೀಪಾವಳಿ ನಂತರ ಎಂದು ಹೇಳಿದ್ದಾರೆ. 
 
ಚಲನಚಿತ್ರಗಳಿಗಾಗಿ ಸತ್ಯ ಪ್ರಕಾಶ್ ಪುತ್ರನ ಹೆಸರನ್ನು ಬದಲಿಸಲು ಬಯಸಿರುವ ನಾರಾಯಣ್, ತಕ್ಕ ಹೆಸರು ಸಿಕ್ಕ ಮೇಲೆ ಅದನ್ನು ಬಹಿರಂಗ ಪಡಿಸುವುದಾಗಿ ಹೇಳಿದ್ದಾರೆ.
 
ಕಳೆದ ಎಪ್ರೀಲ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಮರಾಠಿ ಸಿನಿಮಾ ಸೈರಾಟ್ ಹಲವು ದಾಖಲೆಗಳನ್ನು ಮಾಡಿತ್ತು. ಇನ್ನು 10 ನೇ ತರಗತಿಯಲ್ಲಿ ಓದುತ್ತಿರುವ ರಿಂಕು ಎಂಬು ಹುಡುಗಿ ಆ ಚಿತ್ರದಲ್ಲಿ ನಾಯಕಿಯಾಗಿದ್ದರೆ ಆಕಾಶ್ ಥೋಸರ್ ನಾಯಕನಾಗಿದ್ದ. ನಾಗರಾಜ್ ಮಂಜುಳೆ ಸಿನಿಮಾವನ್ನು ನಿರ್ದೇಶಿಸಿದ್ದರು. ಕೇವಲ 4 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 100ಕೋಟಿಗೂ ಹೆಚ್ಚು ಹಣವನ್ನು ಬಾಚಿಕೊಂಡಿತ್ತು. ಮತ್ತೀಗ ಈ ಸಿನಿಮಾವನ್ನು ಕನ್ನಡ,ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ರಾಕ್‌ಲೈನ್ ನಿರ್ಮಿಸುತ್ತಿದ್ದಾರೆ. ಮೂಲ ಮರಾಠಿ ಸಿನಿಮಾವನ್ನು
 
ಈ ಸಿನಿಮಾ ಕಥೆ ಭಾರತದಲ್ಲಿ ಬೇರೂರಿರುವ ಜಾತಿ ಪದ್ಧತಿಗೆ ಸವಾಲೆಸೆಯುತ್ತಿದ್ದು ಮರ್ಯಾದಾ ಹತ್ಯೆ ಪರಿಕಲ್ಪನೆಯನ್ನು ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sonu Nigam: ಗಾಯಕ ಸೋನು ನಿಗಮ್‌ಗೆ ಬಿಗ್‌ ರಿಲೀಫ್‌, ಹೈಕೋರ್ಟ್‌ ಹೇಳಿದ್ದೇನು ನೋಡಿ

Jr NTR: ಎನ್‌ಟಿಆರ್‌ಗೆ ಅರಸಿ ಬಂದ ಬಿಗ್ ಬಾಲಿವುಡ್ ಆಫರ್‌, ಇಲ್ಲಿದೆ ಅಪ್ಡೇಟ್ಸ್‌

Chaitra Kundapur: ಎರಡು ಕ್ವಾರ್ಟರ್ ಕೊಟ್ರೆ ದೇವರು ಅನ್ನುವವರು ನನ್ನ ತಂದೆ: ಚೈತ್ರಾ ಕುಂದಾಪುರ

Chaitra Kundapura: ಚೈತ್ರಾ ಕುಂದಾಪುರ ಓರ್ವ ಕಳ್ಳಿ, ಅವಳ ಗಂಡನೂ ಅಷ್ಟೇ: ತಂದೆಯಿಂದ ಗಂಭೀರ ಆರೋಪ

ರಾಷ್ಟ್ರ ವಿರೋದಿ ಹೇಳಿಕೆ, ಮಲಯಾಳಂ ನಟ ಅಖಿಲ್ ಮಾರಾರ್‌ ವಿರುದ್ಧ ಜಾಮೀನು ರಹಿತ ದೂರು ದಾಖಲು

ಮುಂದಿನ ಸುದ್ದಿ
Show comments