Webdunia - Bharat's app for daily news and videos

Install App

ದರ್ಶನ್ ಸಂಸಾರದಲ್ಲಿ ಮೂಗು ತೂರಿಸಿದ್ದ, ಹತ್ಯೆಗೂ ಮುನ್ನ ದರ್ಶನ್ ನಮ್ ಬಾಸ್ ಎಂದಿದ್ದ ರೇಣುಕಾಸ್ವಾಮಿ

Krishnaveni K
ಮಂಗಳವಾರ, 11 ಜೂನ್ 2024 (14:02 IST)
Photo Credit: X
ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹಲ್ಲೆಗೊಳಗಾಗಿದ್ದ ಸಾವಿಗೀಡಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿ ಬಗ್ಗೆ ಒಂದೊಂದೇ ಡೀಟೈಲ್ಸ್ ಗಳು ಲಭ್ಯವಾಗುತ್ತಿದೆ.

ಹತ್ಯೆಗೀಡಾದ ರೇಣುಕಾಸ್ವಾಮಿ ದರ್ಶನ್ ಅಪ್ಪಟ ಅಭಿಮಾನಿ. ಆದರೆ ಪವಿತ್ರಾ ಗೌಡರಿಂದಾಗಿ ದರ್ಶನ್ ಸಂಸಾರ ಹಾಳಾಗಿದೆ ಎಂದು ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಪವಿತ್ರಾಗೆ ಅಶ್ಲೀಲ ಸಂದೇಶ, ಫೋಟೋ ಕಳುಹಿಸುತ್ತಿದ್ದ. ಇದನ್ನು ದರ್ಶನ್ ಗಮನಕ್ಕೆ ಪವಿತ್ರಾ ತಂದಿದ್ದರು.

ಪರಿಣಾಮ ದರ್ಶನ್ ತಮ್ಮ ಆಪ್ತರ ಮೂಲಕ ಆತನನ್ನು ಕರೆಸಿಕೊಂಡು ಕುಡಿದ ಮತ್ತಿನಲ್ಲಿ ಸಂಗಡಿಗರೊಂದಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ತೀವ್ರತೆಗೆ ಆತ ಸಾವನ್ನಪ್ಪಿದ್ದಾನೆ. ಬಳಿಕ ದರ್ಶನ್ ಸಂಗಡಿಗರು ಆತನನ್ನು ಆಟೋವೊಂದದರಲ್ಲಿ ಸಾಗಿಸಿ ರಾಜಕಾಲುವೆಗೆ ಎಸೆದಿದ್ದಾರೆ.

ಹತ್ಯೆಗೀಡಾದ ರೇಣುಕಾಸ್ವಾಮಿ ಹಲ್ಲೆಗೆ ಮುನ್ನ ದರ್ಶನ್ ಆಪ್ತರ ಬಳಿ ಅವರು ನಮ್ಮ ಬಾಸ್ ಎಂದಿದ್ದಾನೆ. ನಮ್ಮ ಬಾಸ್ ಸಂಸಾರ ಹಾಳು ಮಾಡಿದ್ದಕ್ಕೆ ಪವಿತ್ರಾಗೆ ಸಂದೇಶ ಕಳುಹಿಸಿದ್ದೆ ಎಂದಿದ್ದಾರೆ. ದರ್ಶನ್ ಸಾಂಸಾರಿಕ ವಿಚಾರದಲ್ಲಿ ಮೂಗು ತೂರಿಸಲು ಹೋಗಿ ಈತ ಪ್ರಾಣ ಕಳೆದುಕೊಂಡಿದ್ದಾನೆ. ಅಭಿಮಾನ ಅತಿರೇಕಕ್ಕೆ ಹೋದಾಗ ಏನಾಗುತ್ತದೆ ಎಂಬುದಕ್ಕೆ ಇದು ಅಪ್ಪಟ ಉದಾಹರಣೆಯಾಗಿದೆ. ಅಭಿಮಾನ ಏನೇ ಇರಲಿ, ಅವರ ಸಂಸಾರ ವಿಚಾರ ತನ್ನದೇ ಎನ್ನುವಂತೆ ಅತಿರೇಕದ ಯೋಚನೆ ಮಾಡಿ ಇಲ್ಲದ ಕೆಲಸಕ್ಕೆ ಕೈ ಹಾಕಿ ಇಂದು ಪ್ರಾಣ ಬಿಟ್ಟಿದ್ದಾನೆ. ಇದೀಗ ಆತನ ವೃದ್ಧ ತಂದೆ-ತಾಯಿ, ಗರ್ಭಿಣಿ ಪತ್ನಿ ಅನಾಥರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments