Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಹುಟ್ಟುಹಬ್ಬಕ್ಕೆ ಅವರ ಎರಡು ಚಿತ್ರಗಳು ಬಿಡುಗಡೆ ?

ರವಿಚಂದ್ರನ್ ಹುಟ್ಟುಹಬ್ಬಕ್ಕೆ ಅವರ ಎರಡು ಚಿತ್ರಗಳು ಬಿಡುಗಡೆ ?
ಬೆಂಗಳೂರು , ಮಂಗಳವಾರ, 13 ಮೇ 2014 (10:29 IST)
ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುವ ಮಲೆಯಾಳಂ ರೀಮೇಕ್ ಚಿತ್ರ ದೃಶ್ಯಂ ನಲ್ಲಿ ಕ್ರೇಜಿಸ್ಟಾರ್   ರವಿಚಂದ್ರನ್ ಅವರು ನಟಿಸುತ್ತಾ ಇರುವ ಬಗ್ಗೆ ಎಲ್ಲರಿಗು ಗೊತ್ತೇ ಇದೆ. ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ.. ಆದರೂ ಚಿತ್ರದ ಕೆಲಸ ಎಲ್ಲವು ಸಂಪೂರ್ಣವಾಗಿದೆ. ನವ್ಯ ನಾಯರ್ ರವಿಚಂದ್ರನ್ ಅವರ ಜೋಡಿ ಆಗಿದ್ದಾರೆ. ಈ ಚಿತ್ರವನ್ನು ಪಿ. ವಾಸು ಅವರು ನಿರ್ದೇಶಿಸಿದ್ದಾರೆ. 
 
ಈ ಚಿತ್ರವೂ ರವಿಚಂದ್ರನ್ ಅವರ ಜನ್ಮದಿನದಂದು ಬಿಡುಗಡೆ ಆಗುತ್ತಿದೆ ಎನ್ನುವ ಸುದ್ದಿ ಈಗ ಗಾಂಧೀ ನಗರದಲ್ಲಿ ಹರಡಿದೆ.ಅಂದರೆ ಈ ಸಿನಿಮಾ ಮೇ 30  ಬಿಡುಗಡೆ ಆಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿವೆ. 
 
ಪ್ರಸ್ತುತ ರವಿಚಂದ್ರನ್ ಪರಮಶಿವ ಚಿತ್ರದಲ್ಲಿ ಬ್ಯುಸಿ. ಈ ಚಿಟೀವನ್ನು ಅಣಜಿ ನಾಗರಾಜ್ ಅವರು ನಿರ್ಮಿಸುತ್ತಿದ್ದು ಮಹೇಶ್ ಬಾಬು ಅವರು ನಿರ್ದೇಶಿಸುತ್ತಾ ಇದ್ದಾರೆ. ಈ ಚಿತ್ರವೂ ಬಾಂಕಾಕ್ ನಲ್ಲಿ ಶೂಟಿಂಗ್ ಪೂರ್ಣ ಮಾಡಿದೆ. ರವಿಚಂದ್ರನ್  ಮತ್ತು ಸಾಕ್ಷಿ  ಶಿವಾನಂದ್ ಅವರ ಹಾಡೊಂದನ್ನು ಅಲ್ಲಿ ಶೂಟ್ ಮಾಡಲಾಗಿದೆ. 
 
ವಿಶೇಷ ಅಂದ್ರೆ ಅಣಜಿ ನಾಗರಾಜ್ ಸಹ ಪರಮಶಿವ ಚಿತ್ರವನ್ನು ರವಿಚಂದ್ರನ್ ಅವರ ಜನ್ಮದಿನದಂದು ಬಿಡುಗಡೆ ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ.  ಎರಡು ಚಿತ್ರಗಳಲ್ಲಿ ನೋಡುವ ಯಾವುದು ಹೆಚ್ಚಿನ ಪ್ರಮಾಣದಲ್ಲಿ ರವಿಚಂದ್ರನ್ ಅವರ ಬರ್ತ ಡೇ ಗೆ ಹೊಳಪು ನೀಡುತ್ತದೆಯೋ !

Share this Story:

Follow Webdunia kannada