Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಚಿತ್ರದಲ್ಲಿ ಕನ್ನಡಿಗ ರವಿವರ್ಮಗೆ ನಟಿಸಲು ಚಾನ್ಸ್ ಸಿಕ್ತು

ಶಾರುಖ್ ಖಾನ್ ಚಿತ್ರದಲ್ಲಿ ಕನ್ನಡಿಗ ರವಿವರ್ಮಗೆ ನಟಿಸಲು ಚಾನ್ಸ್ ಸಿಕ್ತು
, ಶನಿವಾರ, 18 ಏಪ್ರಿಲ್ 2015 (11:03 IST)
ಇತ್ತೀಚೆಗೆ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ರಣ ವಿಕ್ರಮ ಚಿತ್ರ ಬಿಡುಗಡೆ ಆಯಿತು. ಆ ಚಿತ್ರಕ್ಕೆ ಸಂಬಂಧಪಟ್ಟಂತೆ ಉತ್ತಮ ಪ್ರತಿಕ್ರಿಯೆಗಳು ಕೇಳಿ ಬಂತು. ಆ ಚಿತ್ರದ ಸಾಹಸ ದೃಶ್ಯಗಳನ್ನು ಸಿಕ್ಕಾಪಟ್ಟೆ ಮನ ಸೆಳೆಯಿತು ಪ್ರೇಕ್ಷಕರನ್ನು. ಈ ಚಿತ್ರ ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಪ್ರದರ್ಶಿತವಾಗಿ ಅಪಾರವಾದ  ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. 

ಈ ಚಿತ್ರದಲ್ಲಿ  ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡಿರುವವರು ರವಿವರ್ಮ. ಅವರು ಈಗಾಗಲೇ ಅನೇಕ ಹಿಂದಿ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಈ ಕನ್ನಡಿಗ ಈಗ ಮತ್ತೆ ಮತ್ತೊಂದು ಹಿಂದಿ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ನಟನೆಯ ರಯೀಸ್ ನಲ್ಲಿ ಅವರು ಈ ಅವಕಾಶ ಪಡೆದಿದ್ದಾರೆ. 
 
ಅನೇಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭೆ ತೋರಿಸಿರುವ ರವಿವರ್ಮ ಈಗ ಶಾರುಖ್ ಖಾನ್ ಅವರ ಚಿತ್ರದಲ್ಲಿ ನಟಿಸಲು ಇವರು ಮೇ ತಿಂಗಳಲ್ಲಿ ಮುಂಬೈಗೆ ತೆರಳುತ್ತಿದ್ದಾರೆ. ಅವರ ಸಿನಿ ಪಯಣ ಯಶಸ್ವಿಯಾಗಲೆನ್ನುವ ಹಾರೈಕೆ ನಮ್ಮದು.  

Share this Story:

Follow Webdunia kannada