Webdunia - Bharat's app for daily news and videos

Install App

ವೈರಲ್ ಆಗಿದೆ ನಟರಾಜ ಸರ್ವೀಸ್ ಸಿನಿಮಾದ ರವಿಶಂಕರ್ ಹಾಡು

Webdunia
ಶುಕ್ರವಾರ, 19 ಆಗಸ್ಟ್ 2016 (12:49 IST)
ಒಂದೆರಡು ತಿಂಗಳುಗಳ ಹಿಂದೆ ನಟ ಶರಣ್ ತಮ್ಮ ನಟರಾಜ ಸರ್ವೀಸ್ ಸಿನಿಮಾದ ಪ್ರಮೋಷನ್‌ಗಾಗಿ ಬೆಂಗಳೂರಿನ ಗಾಂಧೀಬಜಾರ್‌ನಲ್ಲಿ ಅಲ್ಲ ಅಲ್ಲ ಹಾಡನ್ನು ಭಿಕ್ಷುಕನ ರೀತಿ ವೇಷ ಹಾಕಿಕೊಂಡು ಬೀದಿಯಲ್ಲಿ ಹಾಡಿದ್ದು ನಿಮಗೆಲ್ಲಾ ನೆನಪಿರಬಹುದು. ಇದೀಗ ಸಿನಿಮಾ ತಂಡ ಈ ಹಾಡನ್ನು ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು ಹಾಡಿನಲ್ಲಿ ರವಿಶಂಕರ್ ಅವರ ಅಭಿನಯಕ್ಕೆ ಭರ್ಜರಿ ಪ್ರಶಂಸೆಗಳು ಕೇಳಿ ಬರುತ್ತಿವೆ.
 
ರವಿಶಂಕರ್ ಅವರು ಒಬ್ಬ ಉತ್ತಮ ಕಲಾವಿದ ಅನ್ನೋದರಲ್ಲಿ ಎರಡು ಮಾತಿಲ್ಲ. ಕೇವಲ ಅಭಿನಯ ಮಾತ್ರವಲ್ಲ ಗಾಯನ, ನೃತ್ಯ ಎಲ್ಲದರಲ್ಲೂ ಅವರು ಎತ್ತಿದ್ದ ಕೈ. ಅದರಲ್ಲೂ ಅಲ್ಲ ಅಲ್ಲ ಹಾಡಿನಲ್ಲಿ ರವಿಶಂಕರ್ ಅವರ ಪರ್ಫಾಮೆನ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಮೌಲ್ವಿ ಲುಕ್‌ನಲ್ಲಿರುವ ರವಿಶಂಕರ್ ಅವರು ಅಲ್ಲ ಹಾಡಿಗೆ ಭರ್ಜರಿಯಾಗಿಯೇ ಹೆಜ್ಜೆ ಹಾಕಿದ್ದಾರೆ. ಇನ್ನು ರವಿಶಂಕರ್ ಅವರು ಅಭಿನಯಿಸಿರುವ ಹಾಡಿಗೆ ಸಂಗೀತ ಸಂಯೋಜಿಸಿರೋದು ಸಂಗೀತ ನಿರ್ದೇಶಕ ಅನೂಪ್ ಸೀಳಿನ್. ರವಿಶಂಕರ್ ಗಾಗಿಯೇ ಈ  ಹಾಡನ್ನು ಮಾಡಲಾಗಿದೆಯಂತೆ.ಈ ಹಿಂದೆ ಗೋವಿಂದಾಯ ನಮಃ ಹಾಗೂ ಪ್ಯಾರೆ ಗೆ ಆಗ್ಬಿಟ್ಟೈತೆ ಹಾಡನ್ನು ಕೂಡ ಸಿಳೀನ್ ಅವರು ಕಂಪೋಸ್ ಮಾಡಿದ್ದಾರೆ.
 
ಇನ್ನು ಅಲ್ಲ ಲ್ಲ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದ್ದಂತೆ ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.ಇನ್ನು ಪವನ್ ಅವರು ಈ ಹಾಡನ್ನು ಕೇವಲ 15 ನಿಮಿಷಗಳಲ್ಲಿ ಬರೆದು ಮುಗಿಸಿದ್ದಾರಂತೆ. ಅಲ್ಲದೇ ಈ ಹಾಡು ಇಷ್ಟೊಂದು ಮಟ್ಟದಲ್ಲಿ ಜನರಿಗೆ ಇಷ್ಟವಾಗುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ ಅಂತಾ ಅವರು ಹೇಳಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments