Select Your Language

Notifications

webdunia
webdunia
webdunia
webdunia

ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿರುವ ಮಸ್ತ್ ಗರ್ಲ್ ರವೀನಾ

ಚಿತ್ರ ನಿರ್ಮಾಣ ಮಾಡಿ ನಟಿಸುತ್ತಿರುವ ಮಸ್ತ್ ಗರ್ಲ್ ರವೀನಾ
, ಶುಕ್ರವಾರ, 6 ಮಾರ್ಚ್ 2015 (10:05 IST)
ವಿದ್ಯಾ ಬಾಲನ್ ಅವರನ್ನು ಈ ಪಾತ್ರಕ್ಕೆಂದು ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈಗ ತಿಳಿದು ಬಂದಿರುವ ಸುದ್ದಿ ಏನೆಂದರೆ ಈಗ ಆ ಸ್ಥಳದಲ್ಲಿ  ಮತ್ತೊಬ್ಬ ನಟಿ ಬಂದಿದ್ದಾರೆ. ಅವರೇ ಅಂದಿನ ಮಸ್ತ್ ಮಸ್ತ್ ಹುಡುಗಿ ರವೀನ ಟಂಡನ್. ಯಾವ ವಿಷಯ ಎನ್ನುವುದು ಹಾಗೂ ಯಾವ ಚಿತ್ರಕ್ಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರ ಬಹುದು. ಅದಕ್ಕೆ ಈಗ ತಕ್ಷಣ ನಾವು ಉತ್ತರ ಹೇಳುತ್ತಿದ್ದೇವೆ. ಪಾಕಿಸ್ತಾನದ ಪ್ರಧಾನ ಮಂತ್ರಿ ಆಗಿದ್ದು ಬಾಬ್ ದಾಳಿಗೆ ಒಳಗಾಗಿ ಹತ್ಯೆಯಾಗಿದ್ದ ಮಾಜಿ ಪ್ರಧಾನಿ  ದಿವಂಗತ ಬೆನಜೀರ್ ಭುಟ್ಟೋ ಅವರ ಜೀವನ ಕಥನವನ್ನು ಆಧರಿಸಿದ ಚಿತ್ರ ಈಗ ಬಾಲಿವುಡ್‌ನಲ್ಲಿ ತಯಾಯಾರಾಗುತ್ತಿದೆ.
ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಆರಂಭದಲ್ಲಿ ವಿದ್ಯಾ ಬಾಲನ್‌ಗೆ ಮೊದಲ ಅವಕಾಶ ಸಿಕ್ಕಿತ್ತಾದರು, ಅದು ಕೇವಲ ವದಂತಿ ಎನ್ನುವುದು ಈಗ ಸ್ಪಷ್ಟವಾಗಿದೆ. ಆ ಪಾತ್ರವನ್ನು ಒಂದು ಕಾಲದ ಮಾದಕ ನಟಿ ಆಗಿದ್ದ ರವೀನ ಟಂಡನ್ ಮಾಡುತ್ತಿದ್ದಾರೆ. ಆ ಪಾತ್ರಕ್ಕೆ ಬೇಕಾದ ಸಂಗತಿಗಳನ್ನು ಅವರು ಚಿತ್ರಕಥೆಯಲ್ಲಿ ಬದಲಾವಣೆ ಮಾಡಿದ್ದಾರೆ. ಈಗ ಬಾಲಿವುಡ್ ಟೌನ್ ನಲ್ಲಿ ಅದೇ ದೊಡ್ಡ ಸುದ್ದಿಯಾಗಿದೆ ಎಂದೇ ಹೇಳ ಬಹುದಾಗಿದೆ.  
 
ಇತ್ತೀಚಿಗೆ ಆಕೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆಯುವವರನ್ನು ಭೇಟಿ ಮಾಡಿದ್ದರಂತೆ. ರವೀನ ಅವರಿಗೆ ಕಥೆ ಇಷ್ಟ ಆಯ್ತಂತೆ. ಆಕೆ ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿತ್ವದ ಪಾತ್ರ ಮಾಡುವುದಕ್ಕೆ ಹೆಚ್ಚು ಆಸಕ್ತರಾಗಿದ್ದಾರೆ ಎನ್ನುವ ಸಂಗತಿಯನ್ನು  ಮಾಹಿತಿಗಳು ಸ್ಪಷ್ಟಪಡಿಸಿವೆ. ಈ ಚಿತ್ರಕ್ಕೆ ತಾವೇ ಹಣ ಹೂಡಲು ಸಿದ್ಧ ಆಗಿರುವ ರವೀನ ಈ ಚಿತ್ರದ ಹೊಣೆಯನ್ನು ಹೊರಿಸಲು ಸೂಕ್ತ ನಿರ್ದೇಶಕರ ಹುಡುಕಾಟದಲ್ಲಿ ಇದ್ದಾರಂತೆ. ತಂತ್ರಜ್ಞರ ಆಯ್ಕೆ ಆದ ಬಳಿಕ ಸಿನಿಮಾದ ಕೆಲಸ ಆರಂಭವಾಗುತ್ತದೆ ಎನ್ನುವ ಸಂಗತಿ ತಿಳಿದುಬಂದಿದೆ. ಆದರೆ ರವೀನಾ ಕಡೆಯಿಂದ ಈ ಬಗ್ಗೆ ಯಾವುದೇ  ಸುದ್ದಿ ಇಲ್ಲ!. 

Share this Story:

Follow Webdunia kannada