Select Your Language

Notifications

webdunia
webdunia
webdunia
webdunia

ಅಕ್ಷಯ್ ತಾಯಿಯಾಗಿ ಅಭಿನಯಿಸಲಿರುವ ರತಿ ಅಗ್ನಿಹೋತ್ರಿ

ಅಕ್ಷಯ್ ತಾಯಿಯಾಗಿ ಅಭಿನಯಿಸಲಿರುವ ರತಿ ಅಗ್ನಿಹೋತ್ರಿ
, ಬುಧವಾರ, 29 ಏಪ್ರಿಲ್ 2015 (10:17 IST)
ಕಮಲ್ ಹಾಸನ್ ಜೊತೆ ಏಕ್ ದೋ ಜೆ ಕೇಲಿಯೆ ಚಿತ್ರದಲ್ಲಿ ನಟಿಸಿ ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದ ನಟಿ ರತಿ ಅಗ್ನಿ ಹೋತ್ರಿ. ತನ್ನ ಪ್ರತಿಭೆ, ಮಾದಕತೆಯ  ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿದ್ದಾರೆ. ಅನಿಲ್ ವಿರಾಣಿ ಜೊತೆಗಿನ ಮುವ್ವತ್ತು ವರ್ಷಗಳ ಬಾಂಧವ್ಯ ಕಡಿದು ಬಿದ್ದು ಈಗ ಹೊಸ ಬದುಕಿನತ್ತ ಕೈಚಾಚಿರುವ ರತಿ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಕೆಲವು ವರ್ಷಗಳ ಹಿಂದೆ ಕರೀನಾ ಕಪೂರ್ ತಾಯಿ ಪಾತ್ರಧಾರಿಯಾಗಿದ್ದ ರತಿ ಈಗ ಅಕ್ಷಯ್ ಕುಮಾರ್‌ಗೆ ತಾಯಿ ಆಗುತ್ತಿದ್ದಾರೆ. 
ಅಂದ್ರೆ ರತಿ ಅವರಿಗೆ ಪ್ರಭುದೇವಾ ನಿರ್ದೇಶನದ ಸಿಂಗ್ ಈಸ್ ಬ್ಲಿಂಗ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.ಅಕ್ಷಯ್ ತಾಯಿಯಾಗಿ ನಟಿಸಲು ಸಿದ್ಧವಾಗಿರುವ ರತಿ ಅವರು ಮುಂದೆ ಅನೇಕಾನೇಕ ಹೀರೋ ಹೀರೋಯಿನ್‌ಗಳ ತಾಯಿ-ಅಜ್ಜಿಯಾಗುವ ದಿನಗಳು ದೂರವಿಲ್ಲ ಬಿಡಿ ! 

Share this Story:

Follow Webdunia kannada