Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಮುಂದಿನ ಚಿತ್ರದ ಹೆಸರು 'ರಥಂ'

ಅಲ್ಲು ಅರ್ಜುನ್ ಮುಂದಿನ ಚಿತ್ರದ ಹೆಸರು 'ರಥಂ'
, ಗುರುವಾರ, 2 ಜುಲೈ 2015 (11:28 IST)
ತೆಲುಗು ಸಿನಿರಂಗದಲ್ಲಿ ಅತ್ಯಂತ ಸ್ಟೈಲಿಶ್ ನಟ ಎನ್ನುವ ಹೆಸರು ಪಡೆದ ನಟ ಅಲ್ಲು ಅರ್ಜುನ್. ಅವರು ಟಾಲಿವುಡ್ ಸಿನಿಮಂದಿಯ ಭರವಸೆಯ ನಾಯಕ ಅವರ ಅಭಿಮಾನಿಗಳ ಮೆಚ್ಚಿನ ನಾಯಕರಾಗಿದ್ದಾರೆ. ಇತ್ತೀಚಿನ ಅವರ ಚಿತ್ರ ಸನ್ ಆಫ್ ಸತ್ಯ ಮೂರ್ತಿ ಯಶಸ್ಸಿನ ಮೆಟ್ಟಿಲು ಏರಿತ್ತು. ಆ ಚಿತ್ರದಲ್ಲಿ ಇಬ್ಬರು ನಾಯಕಿಯರ ಮುದ್ದಿನ ಮಾವ ಆಗಿದ್ದ ಅಲ್ಲು ಅರ್ಜುನ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ಸಹ ಇಬ್ಬರು ನಾಯಕಿಯರ ನಾಯಕನಾಗುತ್ತಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಬೋಯಪಾಟಿ. ಆಕ್ಷನ್, ಸೆಂಟಿಮೆಂಟ್ ಇರುವ ಈ ಚಿತ್ರದಲ್ಲಿ ಅಲ್ಲು ಅವರ ಪಾತ್ರ ಅತ್ಯಂತ ಪವರ್ಫುಲ್ ಆಗಿರುತ್ತದೆ ಎನ್ನುವ ಸುದ್ದಿ ಇದೆ. ಹೀರೋಯಿಸಮ್‌ಗೆ ಆದ್ಯತೆ ನೀಡಿರುವ ಈ ಚಿತ್ರದಲ್ಲಿ ಆ ಅಂಶಕ್ಕೆ ಅಗತ್ಯವಿರುವ ಎಲ್ಲ ಬಗೆಯ ಅಂಶಗಳನ್ನು ಸಹಿತ ಸೇರ್ಪಡೆ ಮಾಡಲು ನಿರ್ದೇಶಕರು ಹಿಂದೆ ಉಳಿದಿಲ್ಲ ಎನ್ನುವ ಸುದ್ದಿ ಟಿ ಟೌನ್‌ನಲ್ಲಿ ಹರಡಿದೆ.   
ಈ ಚಿತ್ರಕ್ಕೆ ರಥಂ ಎನ್ನುವ ಶೀರ್ಷಿಕೆ ನೀಡಲು ನಿರ್ಧರಿಸಿದ್ದಾರಂತೆ. ಇದರಲ್ಲಿ ಇಬ್ಬರು ನಾಯಕಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಅವರಿಗೆ ಅವಕಾಶ ಸಿಕ್ಕಿದೆ. ಜೊತೆಗೆ ಕ್ಯಾಥರೀನ್ ಸಹಿತ ಅವಕಾಶ ಪಡೆದಿದ್ದಾರಂತೆ. ಗೀತ ಆರ್ಟ್ಸ್ ಬ್ಯಾನರ್ ನಲ್ಲಿ ಈ ಚಿತ್ರ  ಸಿದ್ಧವಾಗಿದ್ದು, ಮತ್ತೊಮ್ಮೆ ಅಲ್ಲು ಅರ್ಜುನ್ ಇಬ್ಬರು ಹುಡುಗಿಯರ ಜೊತೆ ಡ್ಯುಯೆಟ್ ಹಾಡಲಿದ್ದಾರೆ. ಕ್ಯಾಥರೀನ್ ಗೆ ಮತ್ತೊಮ್ಮೆ ಬನ್ನಿ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿದೆಯಂತೆ.. ಹಂಗಂತ ಸುದ್ದಿ!

Share this Story:

Follow Webdunia kannada