Select Your Language

Notifications

webdunia
webdunia
webdunia
webdunia

ಅತ್ತೆಮನೆಯ ದಾರಿಯಲ್ಲಿ ನಡೆಯುತ್ತಿರುವ ರನ್ನ ಸುದೀಪ್

ಅತ್ತೆಮನೆಯ ದಾರಿಯಲ್ಲಿ ನಡೆಯುತ್ತಿರುವ ರನ್ನ ಸುದೀಪ್
, ಬುಧವಾರ, 27 ಆಗಸ್ಟ್ 2014 (10:11 IST)
ಕಿಚ್ಚ ಸುದೀಪ್ ಅವರ ನಟನೆಯ ರೀಮೇಕ್ ಚಿತ್ರ ಅತ್ತಾರಿಂಟಿಕಿ ದಾರೇದಿ ಗೆ ಕನ್ನಡದಲ್ಲಿ ಯಾವ ಹೆಸರನ್ನು ನೀಡಲಾಗುತ್ತದೆ ಎನ್ನುವ  ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಅತ್ತೆ ಮನೆಗೆ ದಾರಿ ಎಲ್ಲಿ ಎನ್ನುವ  ಹೆಸರು ಇಡಬಹುದು ಎನ್ನುವ ಗುಸುಗುಸು  ಸಹಿತ ಹರಡಿತ್ತು. ಆದರೆ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಆ ಚಿತ್ರಕ್ಕೆ ಈಗ ಮೂರು ಹೆಸರು ಕೇಳಿ ಬಂದಿದೆ . ಅವುಗಳಲ್ಲಿ  ರನ್ನ, ಭಗೀರಥ ಅಥವಾ ರಾಯಬಾರಿ.

ಚಿತ್ರ ನಿರ್ಮಾಪಕರಿಗೆ ರನ್ನ ಅನ್ನುವ ಹೆಸರು ಹೆಚ್ಚು ಇಷ್ಟ ಆಗಿದೆ. ಇದು ಪ್ರಸಿದ್ಧ  ಪ್ರಾಚೀನ ಕವಿ ರನ್ನ ಅವರ ಹೆಸರು ಹೊಂದಿರುವುದರಿಂದ ಸುದೀಪ್ ಗೂ ಸಹಿತ ಇಷ್ಟ ಆಗಿದೆ. 
 
ಈ ಚಿತ್ರವನ್ನು ನಂದ ಕಿಶೋರ್ ಅವರು ನಿರ್ದೇಶಿಸುತ್ತಾ ಇದ್ದಾರೆ. ಹರಿಪ್ರಿಯ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ದೇವರಾಜ್, ಶರತ್ ಲೋಹಿತಾಶ್ವ, ಪ್ರಕಾಶ್ ರೈ, ಮಧುಬಾಲ  ಈ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. 
 
ಈ ಚಿತ್ರಕ್ಕೆಂದು ಸುದೀಪ್ 12  ಬೆಲೆಬಾಳುವ ಸೂಟ್ ಧರಿಸಲಿದ್ದಾರಂತೆ. ಇದು ಈ ವರ್ಷ ಎರಡನೇ ರೀಮೇಕ್ ಚಿತ್ರವಾಗಿದೆ ಸುದೀಪ್ ತಾರ ಬದುಕಲ್ಲಿ . ಮಾಣಿಕ್ಯ ಚಿತ್ರ ತೆಲುಗು ಮಿರ್ಚಿ ಯ  ರೀಮೇಕ್ ಆಗಿದೆ ಅಂಬೋದು ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ.

Share this Story:

Follow Webdunia kannada