Select Your Language

Notifications

webdunia
webdunia
webdunia
webdunia

ಸುದೀಪ್ ಅಭಿನಯದ 'ರನ್ನ' ಮೇ 7ಕ್ಕೆ ಬಿಡುಗಡೆ

ಸುದೀಪ್ ಅಭಿನಯದ 'ರನ್ನ' ಮೇ 7ಕ್ಕೆ ಬಿಡುಗಡೆ
, ಮಂಗಳವಾರ, 28 ಏಪ್ರಿಲ್ 2015 (10:44 IST)
ನಿನ್ನೆ ನಿಮಗೆ ಕಿಚ್ಚ ಸುದೀಪ್ ಅವರ ನಟನೆಯ 'ರನ್ನ' ಚಿತ್ರ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿದ್ದೆವು. ಆದರೆ ಈಗ ತಿಳಿದು ಬಂದ ಸಂಗತಿ ಎಂದರೆ ಕನ್ನಡ ಸಿನಿಮಾದ ವೆಬ್ ಸೈಟ್ ಒಂದಕ್ಕೆ ನಿರ್ಮಾಪಕ ನಿಮಿಷಾಂಬ ಚಂದ್ರಶೇಖರ್ ಅವರು ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ತಿಳಿಸಿದ್ದಾರೆ. ಅದರ ಪ್ರಕಾರ, ಆ ಚಿತ್ರ ಮೇ7ರಂದು ಬಿಡುಗಡೆಯ ಭಾಗ್ಯ ಕಾಣಲಿದೆ. ಸುದೀಪ್, ರಚಿತಾ ರಾಮ್, ಹರಿಪ್ರಿಯಾ, ಮಧುಬಾಲ, ಪ್ರಕಾಶ್ ರಾಜ್ ಮುಂತಾದ ಕಲಾವಿದರು ಅಭಿನಯಿಸಿರುವ ಈ ಚಿತ್ರ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್. ತಮಗೆ ಹಣ ನೀಡುವವರೆಗೂ ಚಿತ್ರದ ಬಿಡುಗಡೆ ಮಾಡುವಂತಿಲ್ಲ ಎನ್ನುವ ಅಂಶ ಮುಂದಿಟ್ಟು ಕೇಸ್ ದಾಖಲು ಮಾಡಿದ್ದರು. 
ಪ್ರಸ್ತುತ ನಿರ್ಮಾಪಕ ಚಂದ್ರ ಶೇಖರ್, ಈ ಚಿತ್ರವನ್ನು ಸೆನ್ಸಾರ್‌ ಮಂಡಳಿಯ ಅನುಮತಿಗೆ ಕಳುಹಿಸಿದ್ದು, ಚಿತ್ರ ಮೇ 7ರಂದು ಬಿಡುಗಡೆಯಾಗಲಿದೆ ಎಂದಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದು,ಚಿತ್ರದ ಧ್ವನಿ ಸುರುಳಿಯನ್ನು ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿತ್ತು. ಚಿತ್ರದ ಎಲ್ಲಾ ಹಾಡುಗಳೂ ಜನಮನ ಗೆದ್ದಿದ್ದು, ಅಪಾರ ಪ್ರೇಕ್,ಕರನ್ನು ಸೆಳೆಯುತ್ತಿದೆ.  

Share this Story:

Follow Webdunia kannada