Select Your Language

Notifications

webdunia
webdunia
webdunia
webdunia

ರಾಣಿ ಮುಖರ್ಜಿ ತಾಯಿಯಾಗುತ್ತಿರುವುದು ನಿಜ

ರಾಣಿ ಮುಖರ್ಜಿ ತಾಯಿಯಾಗುತ್ತಿರುವುದು ನಿಜ
, ಗುರುವಾರ, 3 ಸೆಪ್ಟಂಬರ್ 2015 (09:48 IST)
ಬಾಲಿವುಡ್ ಅಂಗಳದಲ್ಲಿ ರಾಣಿ ಮುಖರ್ಜಿ ತಾಯಿಯಾಗುತ್ತಿದ್ದಾರೆಂಬ ಸುದ್ದಿ ಬಹಳ ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಆದ್ರೆ ಸುದ್ದಿ  ಎಲ್ಲೆಡೆ ಹರಿದಾಡಿದ್ರೂ ರಾಣಿಯಾಗಲೀ ಆದಿತ್ಯಾ ಛೋಪ್ರಾವಾಗಲೀ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಆದ್ರೀಗ ಈ ಸುದ್ದಿ ಖಚಿತವಾಗಿದೆ.
ಆದ್ರೀಗ ರಾಣಿ ಮುಖರ್ಜಿ ತಾಯಿಯಾಗುತ್ತಿರೋದು ನಿಜ ಅಂತಾ  ಅವರ ನಾದಿನಿ ಜ್ಯೋತಿ ಮುಖರ್ಜಿ ಖಚಿತ ಪಡಿಸಿದ್ದಾರೆ. ಆದ್ರೆ ರಾಣಿ ಮುಖರ್ಜಿ ಮಾತ್ರ ಈ ಸಂತಸದ ಸುದ್ದಿಯನ್ನು ಯಾರಿಗೂ ಖಚಿತಪಡಿಸಿಲ್ಲ. ಆದರೆ ಈ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿರುವ ಜ್ಯೋತಿ ರಾಣಿ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದಿದ್ದಾರೆ. ರಾಣಿ ಲಂಡನ್ ನಲ್ಲಿ ಗರ್ಭಿಣಿ ಮಹಿಳೆಯರಿಗೆ  ಚಿಕಿತ್ಸೆ ನೀಡುವ ಮಸಾಜ್ ಸೆಂಟರ್ ನಲ್ಲಿ ಕಾಣಿಸಿಕೊಂಡಗಾಲೇ ಅವರು ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ  ಬೀ ಟೌನ್ ನಲ್ಲಿ ಗುಲ್ಲೆದ್ದಿತ್ತು.
 
ಇನ್ನು ರಾಣಿ ತಾಯಿಯಾಗೋದು ಖಚಿತವಾಗುತ್ತಿದ್ದಂತೆ ಆದಿತ್ಯಾ ಛೋಪ್ರಾ ಕೂಡ ಪತ್ನಿ ಬಗ್ಗೆ ವಿಶೇಷ ಕೇರ್ ತೆಗೆದುಕೊಳ್ಳುತ್ತಿದ್ದಾರಂತೆ.  ಅಲ್ಲದೇ ಕಳೆದ ವಾರವಷ್ಟೇ ರಾಣಿ ವಿಶೇಷವಾದ ಹವನವೊಂದನ್ನು ಏರ್ಪಡಿಸಿದ್ದರು ಎನ್ನಲಾಗುತ್ತಿದೆ. ಅಲ್ಲದೇ ಇದೆಲ್ಲಾ ಮಗುವಿಗಾಗಿ ಅನ್ನೋದು ಬಾಲಿವುಡ್ ಮಂದಿಯ ಲೆಕ್ಕಾಚಾರ.

Share this Story:

Follow Webdunia kannada