Select Your Language

Notifications

webdunia
webdunia
webdunia
webdunia

ಇಂದು ತೆರೆ ಮೇಲೆ ರಂಗು ಹರಿಸಲಿದೆ 'ರಂಗಿ ತರಂಗ'

ಇಂದು ತೆರೆ ಮೇಲೆ ರಂಗು ಹರಿಸಲಿದೆ 'ರಂಗಿ ತರಂಗ'
, ಶುಕ್ರವಾರ, 3 ಜುಲೈ 2015 (10:15 IST)
ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಲೇ ಬಂದಿರುವ ರಂಗಿ ತರಂಗ ಪ್ರೇಕ್ಷಕರೆದುರು ಬರಲು ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇವತ್ತು ರಂಗಿ ತರಂಗ ಸಿನಿಮಾ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದ್ದು, ಸಿನಿ ಪ್ರಿಯರಿಗೆ ಈ ಶುಕ್ರವಾರ ಭರ್ಜರಿ ಮನೋರಂಜನೆಯ ರಸದೌತಣ ನೀಡಿದೋ ಪಕ್ಕಾ ಆಗಿದೆ.  ಹೊಸಬರೇ ಕೂಡಿಕೊಂಡು ನಿರ್ಮಿಸಿರುವ ಈ ಸಿನಿಮಾ ಪ್ರೇಕ್ಷಕರಿಗೆ ಎಷ್ಟು ಇಷ್ಟವಾಗುತ್ತೆ ಅನ್ನೋದಕ್ಕೆ ಇವತ್ತು ಪಕ್ಕಾ ಉತ್ತರ ಸಿಗಲಿದೆ. 
ರಂಗಿ ತರಂಗ. ಸಿನಿರಂಗದ ಹೊಸ ಪ್ರತಿಭೆಗಳಿಂದ ಮೂಡಿ ಬಂದಿರುವ ಸಿನಿಮಾ. ಇದೊಂದು  ಥ್ರಿಲ್ಲರ್  ಮರ್ಡರ್ ಮಿಸ್ಟ್ರಿ.  ಈ ಸಿನಿಮಾ ಯುವ ಜನತೆಗೆ ಇಷ್ಟವಾಗುವುದರಲ್ಲಿ ಯಾವುದೇ ಡೌಟ್ ಇಲ್ಲ. ಇನ್ನು ಇಡೀ ಸಿನಿ ತಂಡವೇ ಯುವ ಪ್ರತಿಭೆಗಳಿಂದಲೇ ಕೂಡಿದೆ. ಹಾಗಾಗಿ ಯುವ ಜನತಗೆ ಈ ಸಿನಿಮಾ ಇಷ್ಟವಾಗುವುದರಲ್ಲಿ ಸಂಶಯವೇ ಇಲ್ಲ.
 
ಇನ್ನು ಈ ಸಿನಿಮಾವನ್ನು ನವ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ಅಲ್ಲದೇ ಹಾಲಿವುಡ್ ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿಸಿದ್ದಾರೆ. ಲ್ಯಾನ್ಸ್ ಕ್ಯಾಪ್ಲನ್ ಹಾಗೂ ವಿಲೀಯಮ್ ಡೇವಿಡ್ ಕ್ಯಾಮೆರಾ ವರ್ಕ್ ಸಿನಿಮಾಕ್ಕಿದೆ. ಅಜನೀಶ್ ಲೋಕನಾಥ್ ಇಂಪಾದ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಇನ್ನು ನಿರೂಪ್ ಭಂಡಾರಿ, ಚೇತನ್,  ಅವಂತಿಕಾ, ರಾಧಿಕಾ ಶೆಟ್ಟಿ ಮುಂತಾದ ನವ ಪ್ರತಿಭೆಗಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಸಿನಿಮಾದಲ್ಲಿ ಪೋಸ್ಟ್ ಮಾಸ್ಚರ್ ಆಗಿ ಮಿಂಚಿದ್ದಾರೆ.

Share this Story:

Follow Webdunia kannada