Webdunia - Bharat's app for daily news and videos

Install App

'ರಾಜನೀತಿ-2'ರಲ್ಲಿ ಅವಕಾಶ ವಂಚಿತರಾದ ರಣಬೀರ್

Webdunia
ಬುಧವಾರ, 1 ಏಪ್ರಿಲ್ 2015 (10:25 IST)
ಸಾಮಾನ್ಯವಾಗಿ  ಒಂದು ಜೋಡಿ ಒಟ್ಟಿಗೆ ಓಡಾಡಿದರೆ   ಅವರ ಬಗ್ಗೆ ಸದಾ ಸುದ್ದಿ ಇದ್ದೇ ಇರುತ್ತದೆ. ಅದರಲ್ಲೂ ಸಿನಿ ರಂಗದವರ ಬಗ್ಗೆ ನಾವು ಹೇಳುವ ಅಗತ್ಯವೇ ಇಲ್ಲ, ಅಷ್ಟೊಂದು ಸುದ್ದಿ ಹರಡಿರುತ್ತದೆ. ಹೇಗೆಂದರೆ ಆ ಬಗ್ಗೆ ಅವರಿಗೆ ಗೊತ್ತೇ ಇರುವುದಿಲ್ಲ ಆದರೆ ಸುದ್ದಿ ಮಾತ್ರ ಸಿಕ್ಕಾಪಟ್ಟೆ  ಹರಡಿರುತ್ತದೆ ಎಂದೇ ಹೇಳ ಬಹುದಾಗಿದೆ. ಈಗ ರಣಬೀರ್ ಮತ್ತು ಕತ್ರಿನಾ ಕೈಫ್ ಅವರ ಬದುಕಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಯಾರಿಗೂ ಗೊತ್ತಿಲ್ಲ ಆದರೆ ಅವರಿಬ್ಬರ ನಡುವೆ ಸುದ್ದಿ ಇಲ್ಲ ಸಲ್ಲದ್ದು ಹರಡಿ ಗಾಸಿಪ್  ಕಾಲಂ ನ್ನು ಹೆಚ್ಚು ಉಜ್ವಲಗೊಳಿಸುತ್ತಿದೆ ಮಾಧ್ಯಮಗಳು. 
ಪ್ರಸ್ತುತ ಕತ್ರಿನ ನಟನೆಯ ಹೊಸ ಚಿತ್ರ ರಾಜ್ ನೀತಿ-2. ಈ ಚಿತ್ರದ ಮೊದಲ ಭಾಗ 2010  ರಲ್ಲಿ ಬಿಡುಗಡೆ ಆಗಿತ್ತು. ಸಾಕಷ್ಟು ಹಣ ಗಳಿಕೆ ಮಾಡಿದ್ದ ಈ ಚಿತ್ರ ಪ್ರಸಿದ್ಧ ರಾಜಕೀಯ ನಾಯಕಿಯ ಕಥೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈಗ ಆ ಚಿತ್ರದ ಎರಡನೇ ಭಾಗ ಕೆಲಸ ಆರಂಭ ಮಾಡುತ್ತಿದೆ. ಈ ಚಿತ್ರದಲ್ಲಿ ಕತ್ರಿನಾ ಪ್ರಿಯತಮ ರಣಬೀರ್ ಕಪೂರ್ ನಟಿಸುತ್ತಿಲ್ಲ. ಮೊದಲ ಭಾಗದಲ್ಲಿ ರಣಬೀರ್ ನಟಿಸಿದ್ದರು. ಈ ಸಿನಿಮಾದಲ್ಲಿ ಕತ್ರಿನ ಆತನಿಲ್ಲದೆ ನಟಿಸುತ್ತಿದ್ದಾಳೆ. 
 
ರಣಬೀರ್ ಪಾತ್ರ ದೇಶ ಬಿಟ್ಟು ವಿದೇಶಕ್ಕೆ ಹೋದ ಕಾರಣ ಮತ್ತು ಕತ್ರಿನಾ ಪಾತ್ರ ಜೀವಂತವಿದ್ದು, ಆಕೆ ಸಕ್ರಿಯವಾಗಿ ರಾಜಕೀಯದಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಆ ಚಿತ್ರದಲ್ಲಿ ಆಕೆಯದ್ದೇ ಹವಾ.. ಆದರೆ ಈ ಬಗ್ಗೆ ಹೆಚ್ಚು ಟೆನ್ಸನ್ಗೆ ಒಳಗಾದವರು ಬಾಲಿವುಡ್ ಮಂದಿ, ಯಾಕೆ ಕತ್ರಿನಾ ಏನಾಯ್ತು ಕತ್ರಿನಾ ಎಂದು ಒದ್ದಾಡುತ್ತಿದ್ದಾರೆ. ಗಾಸಿಪ್ ಇಲ್ಲದೆ ಬಾಲಿವುಡ್ ಪಟ್ಟಣ ಬದುಕಿರೋದಾದ್ರು ಹೇಗೆ ? 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments