Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ರಾಣ

ಶಾರುಖ್ ಖಾನ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದ ರಾಣ
, ಶನಿವಾರ, 24 ಜನವರಿ 2015 (10:30 IST)
ಟಾಲಿವುಡ್ ಚಿತ್ರರಂಗದಲ್ಲಿ ಚೂಸಿ ಆಗಿರುವ ನಟ ರಾಣ ದಗ್ಗುಬಾಟಿ. ಈ ಮೂಲಕ ತನಗೊಂದು ಸ್ಟಾರ್ ಡಂ ಪಡೆದಿದ್ದಾರೆ ಈ ಕಲಾವಿದ. ಅತ್ಯಂತ ಆಕರ್ಷಕ ರೂಪದ ರಾಣ ಕೇವಲ ತೆಲುಗು ಮಾತ್ರವಲ್ಲ ತಮಿಳು ಮತ್ತು ಹಿಂದಿಯಲ್ಲೂ ಸಹಿತ ತಮ್ಮ ಛಾಪು ತೋರಿಸಿದ್ದಾರೆ. ಡಂ ಮಾರೋ ಡಂ, ಎ ಜವಾನಿ ಹೈ ದಿವಾನಿ, ಡಿಪಾರ್ಟ್ಮೆಂಟ್ ಮುಂತಾದ ಹಿಂದಿ ಚಿತ್ರಗಳಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದಾರೆ ರಾಣ. 
ಈ ಮೂಲಕ ಅವರು ಹಿನಿದ್ ಚಿತ್ರರಂಗದಲ್ಲಿಯೂ ಸಹಿತ  ತಮಗೊಂದು ಉತ್ತಮ ಸ್ಥಾನ ಪಡೆದಿದ್ದಾರೆ.  ಈಗ ಅಕ್ಷಯ್ ಕುಮಾರ್ ಅಭಿನಯದ ಬೇಬಿ ಚಿತ್ರದಲ್ಲಿ ಅವರು ಪೊಲೀಸ್ ಆಫೀಸರ್ ಪಾತ್ರಧಾರಿ ಆಗಿದ್ದಾರೆ. ಈ ಮಧ್ಯೆ ಮತ್ತೊಂದು ಸಂಗತಿಯು ಹೆಚ್ಚು ಕೇಳಿ ಬರುತ್ತಿದೆ. ಬೇಬಿಯಲ್ಲಿ ತಾಪ್ಸಿ, ಅನುಪಮ್ ಖೇರ್  ಮುಂತಾದವರು ನಟಿಸಿದ್ದಾರೆ, ಇದು ಸ್ಪೈ ಥ್ರಿಲ್ಲರ್  ಕಥೆಯನ್ನು ಹೊಂದಿದೆ. ಈ ಹಿಂದೆ ವೆಡ್ನೆಸ್ ಡೇ , ಸ್ಪೆಶಲ್  26  ನಂತಹ ಚಿತ್ರಗಳನ್ನು ನಿರ್ದೇಶಿಸಿರುವ ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.  ನಿನ್ನೆ ಆ ಚಿತ್ರ ಬಿಡುಗಡೆ ಆಯಿತು. 
 
ಇವುಗಳ  ನಡುವೆ  ರಾಣಾಗೆ ಮತ್ತೊಂದು ಬಂಪರ್ ಅವಕಾಶ ಸಿಕ್ಕಿದೆ. ಅಂದರೆ ಶಾರುಖ್ ಖಾನ್ ಅಭಿನಯದ  ಮುಂದಿನ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ರಾಣ ದಗ್ಗುಬಾಟಿಗೆ. ಆ ಸಿನಿಮಾದ ಬಗ್ಗೆ   ಅಧಿಕೃತವಾಗಿ ಸದ್ಯದಲ್ಲೇ ತಿಳಿಸಲಾಗುವುದು ಎಂದಿದ್ದಾರೆ ರಾಣ. ಆ ಅವಕಾಶ ನಿಶ್ಚಿತವಾಗಿಯೂ ರಾಣಾಗೇ ದೊರಕಿದರೆ ಅವರ ಬಾಲಿವುಡ್ ಕೆರಿಯರ್ ಉಜ್ವಲವಾಗುವುದರಲ್ಲಿ ಸಂಶಯವೇ ಇಲ್ಲ.

Share this Story:

Follow Webdunia kannada