Select Your Language

Notifications

webdunia
webdunia
webdunia
webdunia

ಥ್ರಿಲ್ಲರ್ ಸಿನಿಮಾದಲ್ಲಿ ರಮ್ಯ ಕೃಷ್ಣ ನಟನೆ?

ಥ್ರಿಲ್ಲರ್ ಸಿನಿಮಾದಲ್ಲಿ ರಮ್ಯ ಕೃಷ್ಣ ನಟನೆ?
bangalore , ಶುಕ್ರವಾರ, 14 ನವೆಂಬರ್ 2014 (13:26 IST)
ಗೋವಿ೦ದುಡು ಅಂದರಿವಾಡಿಲೋ ಚಿತ್ರದ ಯಶಸ್ಸು ನಿರ್ದೇಶಕ ಕೃಷ್ಣವಂಶಿ  ಅವರನ್ನು ಟಾಪ್ ನಿರ್ದೇಶಕರ ಲಿಸ್ಟ್ಗೆ ಸೇರ್ಪಡೆ ಮಾಡಿದೆ. ಅದರ ಸ್ಫೂರ್ತಿಯಿಂದ ಈಗ ಕೃಷ್ಣವಂಶಿ ಮತ್ತೊಂದು ಹೊಸ ಚಿತ್ರದ ನಿರ್ಮಾಣದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಅದು ಥ್ರಿಲ್ಲರ್ ಕಥೆಯನ್ನು ಹೊಂದಿರುವ ಸಿನಿಮಾ ಆಗಿದೆಯಂತೆ. ತನ್ನ ಪತ್ನಿ ರಮ್ಯಕೃಷ್ಣ ರನ್ನ ಈ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ  ಮಾಡುತ್ತಿದ್ದಾರೆ ಕೃಷ್ಣವಂಶಿ. 
 
ಈಗ ಟಾಲಿವುಡ್ ಮಂದಿಗೆ ಥ್ರಿಲ್ಲರ್ ಮೂವಿಗಳ ಬಗ್ಗೆ ಹೆಚ್ಚು ಗಮನ.ಆದರಿಂದ ಕೃಷ್ಣವಂಶಿಯು ಸಹ ಇಂತಹದ್ದೇ ಕಥೆಯನ್ನು ಹೊಂದಿರುವ ಚಿತ್ರ ತೆಲುಗು , ತಮಿಳು ಭಾಷೆಗಳಲ್ಲಿ ನಿರ್ಮಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. 
 
ರಮ್ಯಾ ಕೃಷ್ಣ ತಮಿಳು ವೀಕ್ಷಕರಿಗೆ ತನ್ನ ಟೀವಿ ಷೋ ಮೂಲಕ ಹೆಚ್ಚು ಗೊತ್ತಾದ ಕಾರಣ ಈಗ ಆಕೆಯನ್ನು ಪ್ರಧಾನ ಪಾತ್ರಧಾರಿಯನ್ನಾಗಿಸಿ ಚಿತ್ರವನ್ನು ನಿರ್ದೇಶಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸಧ್ಯಕ್ಕೆ ಈ ಚಿತ್ರದ ನಿರ್ಮಾಪಕರ ಬಗ್ಗೆ ವಿವರ ಹೊರಬಂದಿಲ್ಲ. ಒಂದು ಸುದ್ದಿ ಪ್ರಕಾರ ಕೃಷ್ಣವಂಶಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರಂತೆ!!
 

Share this Story:

Follow Webdunia kannada