Select Your Language

Notifications

webdunia
webdunia
webdunia
webdunia

30 ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ಒಲವು ತೋರಿದ ರಮೇಶ್ ಭಟ್

30 ವರ್ಷಗಳ ಬಳಿಕ ಮತ್ತೆ ನಿರ್ದೇಶನದತ್ತ ಒಲವು ತೋರಿದ ರಮೇಶ್ ಭಟ್
, ಬುಧವಾರ, 27 ಮೇ 2015 (10:17 IST)
ಚಂದನವನದ ಹಿರಿಯ ಅತ್ಯುತ್ತಮ ಪ್ರತಿಭಾವಂತ ನಟ ರಮೇಶ್ ಭಟ್ ಅವರು. ಅವರ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ಏಕೈಕ ಚಿತ್ರ ಪರಮೇಶಿಯ ಪ್ರೇಮ ಪ್ರಸಂಗ. ಈ ಚಿತ್ರ  ಬಿಡುಗಡೆ ಆಗಿ ಈಗಾಗಲೇ 30 ವರ್ಷಗಳು ಪೂರ್ಣವಾಗಿದೆ.1985 ರಲ್ಲಿ ಬಿಡುಗಡೆಯಾದ ಆ ಚಿತ್ರವು ಬಾಕ್ಸಾಫೀಸಲ್ಲಿ  ಉತ್ತಮವಾದ ಫಲಿತಾಂಶ ನೀಡಿತ್ತು. ಅದಾದ ಬಳಿಕ ರಮೇಶ್ ಭಟ್ ಅವರು ನಟನೆಗೆ ತಮ್ಮನ್ನು ಸೀಮಿತಗೊಳಿಸಿಕೊಂಡುಬಿಟ್ಟರು. ಆದರೆ ಬಹುಕಾಲದ ಬಳಿಕ ನಟ ರಮೇಶ್ ಭಟ್ ಅವರು ಮತ್ತೊಮ್ಮೆ ನಿರ್ದೇಶಕರ ಕುರ್ಚಿಯಲ್ಲಿ ಕೂರಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಸಿಹಿ ಸುದ್ದಿ ಹೊರಬಂದಿದೆ.ಪಪ್ರೇಪ  ಚಿತ್ರದ ಕಥೆಯನ್ನು ಕನ್ನಡ ಚಿತ್ರರಂಗದ ಅಸಮಾನ್ಯ ನಿರ್ದೇಶಕ-ನಟ ಶಂಕರ್ ನಾಗ್ ಅವರು ರಚನೆ ಮಾಡಿದ್ದು. ಈ ಚಿತ್ರದಲ್ಲಿ ಶಂಕರ್ ನಾಗ್, ಅರುಂಧತಿ ನಾಗ್ ಮತ್ತು ಮಾಸ್ಟರ್ ಮಂಜುನಾಥ್ ಅಭಿನಯಿಸಿದ್ದರು. ಈ ಚಿತ್ರದ ಅಭಿನಯಕ್ಕೆಂದು ಮಾಸ್ಟರ್ ಮಂಜುನಾಥ್ ಅವರಿಗೆ ರಾಜ್ಯಪ್ರಶಸ್ತಿ ದೊರಕಿತ್ತು. 
ಒಂದೇ ತೆರನಾದ ಪಾತ್ರಗಳನ್ನೂ ಮಾಡುವುದರಲ್ಲೇ ತಮ್ಮನ್ನು ತೊಡಗಿಸಿ ಕೊಂಡಿದ್ದು, ಈಗ ಬದಲಾವಣೆಗಾಗಿ ಚಿತ್ರನಿರ್ದೇಶನ ಮಾಡುವ ಕಡೆಗೆ ತಮ್ಮ ಚಿತ್ತ ನೆಟ್ಟಿರುವುದಾಗಿ ನಟ - ನಿರ್ದೇಶಕ ರಮೇಶ್ ಭಟ್ ಅವರು ತಿಳಿಸಿದ್ದಾರೆ. ಈ ವರ್ಷದೊಳಗೆ ಚಿತ್ರ ಸೆಟ್ ಏರುತ್ತಿದೆ ಎನ್ನುವ ಸುದ್ದಿ ಇದೆ. ಸರಿ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ರಮೇಶ್ ಭಟ್  1981 ರಲ್ಲಿ ಬಿಡುಗಡೆಯಾದ ಮಿಂಚಿನ ಓಟ ಚಿತ್ರದ ಮೂಲಕ ಸಿನಿರಂಗಕ್ಕೆ ಬಂದರು. ಈಗ ಹೊಸ ಚಿತ್ರದ ನಿರ್ದೇಶನದತ್ತ ಒಲವು ತೋರುತ್ತಿರುವ ರಮೇಶ್ ಭಟ್ ಅವರಿಗೆ ನಮ್ಮ ಕಡೆಯಿಂದ ಶುಭ ಹಾರೈಕೆ.  

Share this Story:

Follow Webdunia kannada