Select Your Language

Notifications

webdunia
webdunia
webdunia
webdunia

ಫುಲ್ ಬ್ಯುಸಿಯಾಗಿದ್ದಾರೆ ನಟ ರಮೇಶ್ ಅರವಿಂದ್

ಫುಲ್ ಬ್ಯುಸಿಯಾಗಿದ್ದಾರೆ ನಟ ರಮೇಶ್ ಅರವಿಂದ್
, ಸೋಮವಾರ, 30 ನವೆಂಬರ್ 2015 (12:35 IST)
ಕನ್ನಡದ ಅತ್ಯಂತ ಕ್ರಿಯಾಶೀಲ ನಟರಲ್ಲಿ ಒಬ್ಬರು ರಮೇಶ್ ಅರವಿಂದ್ . ಒಂದು ನಿಮಿಷ ಕೂಡ ಸುಮ್ಮನೆ ಕೂರೋದು ಅಂದ್ರೆ ಅವರಿಗೆ ಬಹು ದೊಡ್ಡ ಹಿಂಸೆಯಂತೆ. ಇನ್ನು ರಮೇಶ್ ಅರವಿಂದ್ ತಿಂಗಳುಗಟ್ಟಲೇ ಸುಮ್ಮನೆ ಕಾಲ ಕಳೆದದ್ದು ಇಲ್ವೇ ಇಲ್ವವಂತೆ. ಆದ್ರೆ ಕಳೆದ ಕೆಲ ವರ್ಷಗಳಿಗೆ ಹೋಲಿಸಿದ್ರೆ ಸದ್ಯ ರಮೇಶ್ ಅವರು ತುಂಬಾ ಬ್ಯುಸಿಯಾಗಿದ್ದಾರೆ.

ಈಗಾಗಲೇ ಎರಡು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಮೇಶ್ ಈಗ ಸುನೀಲ್ ಕುಮಾರ್ ದೇಸಾಯಿ ಅವರ ರೇ  ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೇ ಮಡಿಕೇರಿಯಲ್ಲಿ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಸದ್ಯ ರಮೇಶ್ ಹೇಳುವ ಪ್ರಕಾರ ಮುಂದಿನ ವರ್ಷ ಫೆಬ್ರವರಿಯವರೆಗೆ ಅವರಿಗೆ ಕೂರೋದಕ್ಕೂ ಸಮಯವಿಲ್ಲದಷ್ಟು ಕೆಲಸವಿದೆಯಂತೆ. ಆ ಬಳಿಕ ಅವರು ತಮ್ಮ ಸಿನಿಮಾ ನಿರ್ದೇಶನದ ಬಗ್ಗೆ ತಲೆಕೆಡಿಸಿಕೊಳ್ಳಲಿದ್ದಾರಂತೆ.
 
ಸಿನಿಮಾದ ಜೊತೆಗೆ ರಮೇಶ್ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ.ವೀಕೆಂಡ್ ವಿತ್ ರಮೇಶ್ ಸೀಸನ್-2 ಅನ್ನು ರಮೇಶ್ ಅವರೇ ನಡೆಸಿಕೊಡಲಿದ್ದಾರೆ. ಇದರ ಜೊತೆಗೆ ಇಂತೀ ನಿಮ್ಮ ರಮೇಶ್ ಅನ್ನೋ ಕಾರ್ಯಕ್ರಮದ ಜವಬ್ದಾರಿಯೂ ರಮೇಶ್ ಹೆಗಲ ಮೇಲಿದೆ.ಅದಲ್ಲೆದರ ಬಳಿಕ ರಮೇಶ್ ತಮ್ಮ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಗಣೇಶ್ ಹಾಗೂ ರಮೇಶ್ ಈ ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾಕ್ ಲೈನ್ ವೆಂಕಟೇಶ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

Share this Story:

Follow Webdunia kannada