Select Your Language

Notifications

webdunia
webdunia
webdunia
webdunia

ವಾಸ್ತುವನ್ನು ನಂಬಿ ಅದರಂತೆ ನಡೆಯುವ ರಕ್ಷಿತ್ ಶೆಟ್ಟಿ

ವಾಸ್ತುವನ್ನು ನಂಬಿ ಅದರಂತೆ ನಡೆಯುವ ರಕ್ಷಿತ್ ಶೆಟ್ಟಿ
, ಗುರುವಾರ, 29 ಜನವರಿ 2015 (09:45 IST)
ಯಾಕೆ ಈ ರೀತಿಯ ಶೀರ್ಷಿಕೆ ಇದೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಕಾಡಬಹುದು. ಅದಕ್ಕೆ ಕಾರಣವಿದೆ.  ಕನ್ನಡ ಅಪರೂಪದ ಪ್ರತಿಭಾವಂತ ನಟ ರಕ್ಷಿತ್ ಶೆಟ್ಟಿ ಈಗ ಯೋಗರಾಜ್ ಭಟ್ ಅವರ ನಿರ್ದೇಶನದ ವಾಸ್ತು ಪ್ರಕಾರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ  ವಾಸ್ತು ಅಂಶಗಳಿಗೆ ಸಂಬಂಧಪಟ್ಟ ಆಲೋಚನೆಗಳನ್ನು ಮಾರಾಟ ಮಾಡುವ ಪಾತ್ರಧಾರಿ ಆಗಿದ್ದಾರೆ. 
ಇದರಲ್ಲಿ ಈತ ವಾಸ್ತುವನ್ನು ನಂಬುವ ಹುಡುಗನಲ್ಲ. ಅದರಲ್ಲೂ  ಅತಿಮಾನುಷ ಶಕ್ತಿ ಬಗ್ಗೆ ಆತನಿಗೆ ನಂಬಿಕೆ ಅನ್ನೋದೇ ಇಲ್ಲ. ಆದರೆ ನಿಜ ಬದುಕಲ್ಲಿ ಈ ಬಗ್ಗೆ ರಕ್ಷಿತ್ ಗೆ ಸಿಕ್ಕಾಪಟ್ಟೆ ನಂಬಿಕೆಯಂತೆ. ಹಾಗಂತ ಖುದ್ದು ಅವರೇ ಹೇಳಿದ್ದಾರೆ. ಈ 6  ಆತನ ಅದೃಷ್ಟ ಸಂಖ್ಯೆಯಂತೆ. ಅಲ್ಲದೆ  3 ಸಹಿತ ಆತನ ಅದೃಷ್ಟ ಸಂಖ್ಯೆ ಎಂದು ನಂಬುತ್ತಾರಂತೆ ರಕ್ಷಿತ್. ಅವರ ಜನ್ಮ ದಿನದ ಅನ್ವಯ ಅಂದರೆ ಜೂನ್ -6, 1983  ಕೂಡಿದಾಗ ಬರುವ ಉತ್ತರ  3, 6 ಅಥವಾ 9   ಹೀಗೆ ಕಲಾವಿದರು ಮಾಡುವ ಪಾತ್ರದಂತೆ ಮನಸ್ಥಿತಿ ಹೊಂದಿರಲ್ಲ. ಅವರು ಮನುಷ್ಯರು ತಾನೇ ಇದೆಲ್ಲ ಸಾಮಾನ್ಯ ಎಂದು ನೀವು ಹೇಳುವುದಾದರೆ, ನಮ್ಮ ಕಡೆಯಿಂದ ಅದಕ್ಕೆ ಓಕೆ ಓಕೆ  ಎನ್ನುವ ಉತ್ತರ !
 

Share this Story:

Follow Webdunia kannada