Webdunia - Bharat's app for daily news and videos

Install App

ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಟ್ಟ ರಕ್ಷಿತ್ ಶೆಟ್ಟಿ: ಇಂದು ಬಿಗ್ ಅಪ್ ಡೇಟ್

Webdunia
ಬುಧವಾರ, 13 ಡಿಸೆಂಬರ್ 2023 (08:40 IST)
ಬೆಂಗಳೂರು: ಸಪ್ತಸಾಗರದಾಚೆ ಎಲ್ಲೊ 2 ಸಿನಿಮಾ ಬಿಡುಗಡೆಯಾದ ಬಳಿಕ ರಕ್ಷಿತ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ರಕ್ಷಿತ್ ಕೈಯಲ್ಲಿ ಈಗ ಹಲವರು ಪ್ರಾಜೆಕ್ಟ್ ಗಳಿವೆ. ಉಳಿದವರು ಕಂಡಂತೆ ಪಾರ್ಟ್ 2, ಪುಣ್ಯಕೋಟಿ ಹೀಗೆ ಹಲವು ಪ್ರಾಜೆಕ್ಟ್ ಗಳನ್ನು ರಕ್ಷಿತ್ ಮಾಡಲಿದ್ದಾರೆ. ಆದರೆ ಮೊದಲು ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಇಂದು ಉತ್ತರ ಸಿಗಲಿದೆ.

ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಪಾರ್ಟಿಯಂತಹ ಕಾಮಿಡಿ ಸಿನಿಮಾ ಯಾವಾಗ ಮತ್ತೆ ಮಾಡ್ತೀರಿ ಎಂದು ರಕ್ಷಿತ್ ಶೆಟ್ಟಿ ಹಾಗೂ ಪರಂವಾ ನಿರ್ಮಾಣ ಸಂಸ್ಥೆಗೆ ಹಲವರು ಪ್ರಶ್ನೆ ಮಾಡುತ್ತಿದ್ದಾರೆ. ಇದೀಗ ರಕ್ಷಿತ್ ಕಿವಿಗೂ ತಲುಪಿದೆ.

ನಿಮ್ಮ ಬೇಡಿಕೆ ನಮ್ಮ ಕಿವಿಗೂ ಬಿದ್ದಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಅಪ್ ಡೇಟ್ ಕೊಡುವುದಾಗಿ ಹೇಳಿದ್ದಾರೆ. ಹೀಗಾಗಿ ರಕ್ಷಿತ್ ಮುಂದಿನ ಸಿನಿಮಾ ಕಿರಿಕ್ ಪಾರ್ಟಿ 2 ಎಂದು ಪಕ್ಕಾ ಆಗಿದೆ. ಕಿರಿಕ್ ಪಾರ್ಟಿ 1 ನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದರು. ಆದರೆ ರಿಷಬ್ ಈಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಬ್ಯುಸಿ. ಹೀಗಾಗಿ ಅವರು ಕಿರಿಕ್ ಪಾರ್ಟಿ 2 ಮಾಡಲಾರರು. ಹೀಗಾಗಿ ರಕ್ಷಿತ್ ಈ ಬಾರಿ ಯಾವ ಹೊಸ ತಂಡದೊಂದಿಗೆ ಕಿರಿಕ್ ಪಾರ್ಟಿ 2 ಮಾಡಲಿದ್ದಾರೆ ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಿಗೆ ಜನ್ಮನೀಡಿದ ಕಿಯಾರಾ ಅಡ್ವಾಣಿ: ಬಾಲಿವುಡ್‌ನ ಸ್ಟಾರ್‌ ಜೋಡಿ ಮನೆಯಲ್ಲಿ ಸಂಭ್ರಮ

ನಟಿ ವೈಷ್ಣವಿ ಗೌಡ ಮದುವೆಯಾದ್ರೂ ತಾಳಿ ಹಾಕಲ್ಲ ಯಾಕೆ: ಸ್ಪಷ್ಟನೆ ನೀಡಿದ ನಟಿ

ನಟಿ ಬಿ. ಸರೋಜಾ ದೇವಿ ನೆನಪಿಗೆ ವಿಶೇಷ ಗೌರವ ನೀಡಲು ಮುಂದಾದ ರಾಜ್ಯ ಸರ್ಕಾರ

ದಿ ಡೆವಿಲ್ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿತಾ, ಸೀಮಂತದ ಫೋಟೋ ಹಂಚಿ ಕುಡ್ಲದ ಹುಡುಗಿ ಎಂದ ಗಂಗಾ ಪಾತ್ರದಾರಿ

ಮುಂದಿನ ಸುದ್ದಿ
Show comments