Select Your Language

Notifications

webdunia
webdunia
webdunia
webdunia

ಸನ್ನಿ ಲಿಯೋನ್‌ಳನ್ನು ಒದ್ದೆ ಮಾಡ್ತಾಳಂತೆ ರಾಖಿ

ಸನ್ನಿ ಲಿಯೋನ್‌ಳನ್ನು ಒದ್ದೆ ಮಾಡ್ತಾಳಂತೆ ರಾಖಿ
, ಗುರುವಾರ, 2 ಜುಲೈ 2015 (10:11 IST)
ಒಂದು ಕಾಲದಲ್ಲಿ ಐಟಂ ಗರ್ಲ್ ಅಂದ್ರೆ ಎಲ್ಲರ ಬಾಯಲ್ಲೂ ಹರಿದಾಡುತ್ತಿದ್ದದ್ದು ರಾಖಿ ಸಾವಂತ್ ಹೆಸರು. ಆದ್ರೆ ಇತ್ತೀಚಿನ ದಿನಗಳಲ್ಲಿ ಎಲ್ಲೂ ರಾಖಿ ಹೆಸರನ ಸದ್ದೇ ಇಲ್ಲ. ರಾಕಿ ಸಾವಂತ್ ಎಂಬಾಕೆ ಇದ್ದಾಳೆ ಅನ್ನೋದೇ ಅದೆಷ್ಟೋ ಜನರಿಗೆ ನೆನಪೇ ಇಲ್ಲ. ಆದ್ರೆ ಇಷ್ಟು ದಿನ ತನ್ನ ಪಾಡಿಗೆ ತಾನು ಸುಮ್ಮನಿದ್ದ ರಾಖಿ ಇದೀಗ ಹೊಸ ಬಾಂಬ್ ಸಿಡಿಸಿ ನಾನಿದ್ದೇನೆ ಅನ್ನೊಂದನ್ನು ಪ್ರೂವ್ ಮಾಡಿದ್ದಾಳೆ. ಅಂದ್ಹಾಗೆ ಆಕೆ ಬಾಂಬ್ ಸಿಡಿಸಿದ್ದು ಯಾರ ಮೇಲೆ ಗೊತ್ತಾ ಸನ್ನಿ ಲಿಯೋನ್ ಮೇಲೆ. 
ಹೌದು, ಯಾವಾಗ ಬಾಲಿವುಡ್ ನಲ್ಲಿ ಸನ್ನಿ ಮೇನಿಯಾ ಶುರುವಾಯ್ತೋ ಅದೆಷ್ಟೋ ಐಟಂ ಡ್ಯಾನ್ಸರ್ ಗಳು ಮೂಲೆ ಸೇರಿದ್ರು. ಅದರಲ್ಲಿ ರಾಖಿ ಸಾವಂತ್ ಕೂಡ ಒಬ್ಬಳು. ಬಾಲಿವುಡ್ ನಲ್ಲಿ ಈಗ ಎಲ್ಲೆಡೆ ಸನ್ನಿ ಹವಾನೇ ಜೋರಾಗಿರುವುದರಿಂದ ಇದಪ ಸಹಜವಾಗೇ ರಾಖಿ  ಮನಸ್ಸಿಗೆ ನೋವುಂಟು ಮಾಡಿದೆ. ಆಕೆಯಿಂದಾಗಿ ನನ್ನ ಪಾಲಿನ ಅವಕಾಶ ದೂರವಾಗಿದೆ ಅಂತಾ ರಾಖಿ ಗರಂ ಆಗಿದ್ದಾಳೆ. ಹಾಗಾಗಿ ಏಕ್ ಪಹೇಲಿ ಲೀಲಾ ಸಿನಿಮಾದಲ್ಲಿನ ಸನ್ನಿ ಪಾತ್ರದ ಬಗ್ಗೆ ಮಾತನಾಡಿರುವ ರಾಖಿ ಲೀಲಾ ಕೋ ಗಿಲಾ ಕರ್ ದುಂಗಿ ಎಂದಿದ್ದಾಳೆ.
 
ಇನ್ನು ಇತ್ತೀಚೆಗೆ ಮತ್ತೊಬ್ಬ ಐಟಂ ಡ್ಯಾನ್ಸರ್ ಸೆಲಿನಾ ಜೇಟ್ಲಿ ಕೂಡ ಸನ್ನಿ ಲಿಯೋನ್ ಬಗ್ಗೆ ಅಸಮಾದಾನ ಹೊರ ಹಾಕಿದ್ದಳು. ಆದರೆ ಇವರು ಯಾರು ಹೇಳಿದ ಮಾತಿಗಳಿಗೆ ಸನ್ನಿ ಲಿಯೋನ್ ಮಾತ್ರ ತಲೆಕೆಡಿಸಿಕೊಂಡಿಲ್ಲ. ಆದ್ರೆ ರಾಖಿ ಸಾವಂತ್ ಮಾತುಗಳನ್ನು ಕೇಳುತ್ತಿದ್ದರೆ ಆಕೆ ಸನ್ನಿ ಲಿಯೋನ್ ಬಗ್ಗೆ ಎಷ್ಟು ತಲೆ ಕೆಡಿಸಿಕೊಂಡಿದ್ದಾಳೆ ಅನ್ನೋದು ಮಾತ್ರ ಎಂಥಾ ದಡ್ಡರಿಗೂ ಅರ್ಥವಾಗಿಬಿಡುತ್ತದೆ.

Share this Story:

Follow Webdunia kannada