Webdunia - Bharat's app for daily news and videos

Install App

ಸೂಪರ್ ಸ್ಟಾರ್ ರಜನಿಕಾಂತ್ ’2.0’ ಡಬ್ಬಿಂಗ್

Webdunia
ಬುಧವಾರ, 28 ಡಿಸೆಂಬರ್ 2016 (13:41 IST)
ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ಮತ್ತೆ ಡಬ್ಬಿಂಗ್ ಹೇಳೋಕೆ ರೆಡಿಯಾಗಿದ್ದಾರೆ. ಶಂಕರ್ ರೋಬೋ ಚಿತ್ರದ ಮುಂದಿನ ಅವತರಣಿಕೆ 2.0 ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಸದ್ಯಕ್ಕೆ ಡಬ್ಬಿಂಗ್ ಹೇಳುವ ಕಾರ್ಯದಲ್ಲಿ ರಜನಿಕಾಂತ್ ಮಗ್ನರಾಗಿದ್ದಾರೆ.
 
ಆಸ್ಕರ್ ಅಕಾಡೆಮಿ ಪ್ರಶಸ್ತಿ ವಿಜೇತ ರಸೂಲ್ ಪೊಕುಟ್ಟಿ ಈ ಚಿತ್ರಕ್ಕೆ ಸೌಂಡ್ ಎಂಜಿಯರ್ ಆಗಿದ್ದು, ಅವರ ಉಪಸ್ಥಿತಿಯಲ್ಲಿ ರಜನಿ ಡಬ್ಬಿಂಗ್ ಹೇಳಿರುವ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ರಸೂಲ್, ತಲೈವಾಗೆ ಕೆಲಸದ ಕಡೆಗಿನ ಶ್ರದ್ಧೆ ಸಾಮಾನ್ಯದ್ದಲ್ಲ. ಒಂದೇ ದಿನದಲ್ಲಿ ಮೂರು ರೀಲ್ ಮುಗಿಸಿದರೆಂದು, ಅವರ ಕಾರ್ಯವೈಖರಿ ನೋಡಿ ಚಕಿತನಾಗಿದ್ದೇನೆ ಎಂದಿದ್ದಾರೆ.
 
2.0 ಚಿತ್ರ ರೋಬೋ ಮುಂದುವರಿದ ಭಾಗ ಅಲ್ಲ. ಇದು ಸಂಪೂರ್ಣ ಭಿನ್ನವಾದ ಚಿತ್ರ ಎಂದು ರಸೂಲ್ ಹೇಳಿದ್ದಾರೆ. ಸುಮಾರು ರೂ.400 ಕೋಟಿ ಭಾರಿ ಬಜೆಟ್‍ನೊಂದಿಗೆ ನಿರ್ಮಿಸಿರುವ ಚಿತ್ರ. ಈ ಚಿತ್ರಕ್ಕೆ ಶಂಕರ್ ಆಕ್ಷನ್ ಕಟ್ ಹೇಳಿದ್ದು. ಅಕ್ಷಯ್ ಕುಮಾರ್ ಖಳನಟನಾಗಿ ಪಾತ್ರ ಪೋಷಿಸಿದ್ದಾರೆ. ಎಮಿ ಜಾಕ್ಸನ್ ಚಿತ್ರದ ನಾಯಕಿ. ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮುಂದಿನ ಸುದ್ದಿ
Show comments