Webdunia - Bharat's app for daily news and videos

Install App

ರಜಿನಿಕಾಂತ್ ರಾಜಕೀಯ ಪ್ರವೇಶದ ಡೇಟ್ ಫಿಕ್ಸ್..?

Webdunia
ಗುರುವಾರ, 18 ಮೇ 2017 (18:59 IST)
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ರಜಿನಿಕಾಂತ್ ರಾಜಕೀಯ ಪ್ರವೇಶ ಕುರಿತಂತೆ ಎದ್ದಿದ್ದ ಊಹಾಪೋಹಗಳಿಗೆ ಡಿಸೆಂಬರ್`ನಲ್ಲಿ ತೆರೆ ಬೀಳುವ ಸಾಧ್ಯತೆ ಇದೆ. ಬರುತ್ತಿರುವ ವದರಿಗಳ ಪ್ರಕಾರ, ಡಿಸೆಂಬರ್ 12ರಂದು ತಮ್ಮ ಹುಟ್ಟುಹಬ್ಬದ ದಿನ ರಜಿನಿಕಾಂತ್ ರಾಜಕೀಯ ಪ್ರವೇಶದ ಗೋಷಣೆ ಮಾಡ್ತಾರಂತೆ.
 

ರಜಿನಿಕಾಂತ್ ಅವರ ಬಹುದಿನಗಳ ಗೆಳೆಯ ರಾಜ್ ಬಹದ್ದೂರ್, ರಜಿನಿ ರಾಜಕೀಯ ಪ್ರವೇಶದ ಸುದ್ದಿಯನ್ನ ತಳ್ಳಿಹಾಕಲು ಸಾಧ್ಯವಿಲ್ಲ. ನನ್ನ ಜೊತೆಯೂ ಈ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಕಳೆದ ಬಾರಿ ರಜಿನಿಕಾಂತ್ ಬೆಂಗಳೂರಿಗೆ ಬಂದಿದ್ದಾಗ ನನ್ನ ಜೊತೆ 12 ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಜಯಲಲಿತಾ ನಿಧನದ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.  ಜನರ ಹಿತ ಕಾಯುವ ದೃಷ್ಟಿಯಿಂದ ರಜಿನಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ರಾಜ್ ಬಹದ್ದೂರ್ ಹೇಳಿರುವುದಾಗಿ ವರದಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

Operation Sindoor:ಶೀರ್ಷಿಕೆಗಾಗಿ ಬಾಲಿವುಡ್‌ ನಿರ್ಮಾಪಕರ ಮಧ್ಯೆ ಭಾರೀ ಪೈಪೋಟಿ

Operation Sindoor: ಶಾಂತವಾಗಿರಿ, ಜಾಗರೂಕರಾಗಿರಿ, ಗೆಲುವು ನಮ್ಮದೇ: ರಾಜಮೌಳಿ ಪೋಸ್ಟ್‌

Operation Sindoor: ದೇಶಕ್ಕಾಗಿ ದಿಟ್ಟ ಹೆಜ್ಜೆಯಿಟ್ಟ ಕಮಲ್ ಹಾಸನ್, ಬೇರೆಲ್ಲ ಆಮೇಲೆ ಎಂದ ನಟ

ಚಂದನ್ ಶೆಟ್ಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೀತಾ ವಲ್ಲಭ ಸೀರಿಯಲ್ ನಟಿ ಸುಪ್ರೀತಾ

ಮುಂದಿನ ಸುದ್ದಿ
Show comments