Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಪಾಲಿಗೆ ರಜನಿಕಾಂತ್ ಕರೆ ಶುಕ್ರವಾರ ಶುಭವಾಯ್ತು...!

ಕಿಚ್ಚ ಸುದೀಪ್ ಪಾಲಿಗೆ ರಜನಿಕಾಂತ್ ಕರೆ ಶುಕ್ರವಾರ ಶುಭವಾಯ್ತು...!
, ಸೋಮವಾರ, 15 ಡಿಸೆಂಬರ್ 2014 (09:29 IST)
ಕಳೆದವಾರ ಶುಕ್ರವಾರ  ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಹುಟ್ಟು ಹಬ್ಬ. ಅಂದು ಮತ್ತೊಂದು ಸಂತೋಷದ ದಿನ ಅವರ ಅಭಿಮಾನಿಗಳಿಗೆ. ಮುಖ್ಯವಾಗಿ ರಜನಿ ಅವರ ಬಹು ನಿರೀಕ್ಷಿತ ಚಿತ್ರ ಲಿಂಗಾ ಅದ್ಧೂರಿಯಿಂದ ಬಿಡುಗಡೆ ಆಯ್ತು. ಅದೇ ದಿನ ಮತ್ತೊಬ್ಬ ನಟನ ಬಾಳಿನಲ್ಲೂ ಸಹಿತ  ಹೆಚ್ಚು ಖುಷಿಯ ದಿನ ಅದಕ್ಕೆ ಕಾರಣ ಅವರಿಗೆ ಬಂದ ಫೋನ್ ಕರೆ. ಆರೀತಿ ಖುಷಿ ಪಟ್ಟ ನಟ  ನನ್ ಅದರ ದೆನ್ ಕಿಚ್ಚ ಸುದೀಪ್. ಅವರು ಆ ರೀತಿ ಖುಷಿ ಪಡಲು ಕಾರಣ ಅವರ ಫೋನ್ ಗೆ ಒಂದು ಕರೆ ಬಂತು. ಅದು ಗೊತ್ತಿಲ್ಲದ ನಂಬರ್. ಸರಿ ಯಾರು ಎಂದು ರಿಸೀವ್ ಮಾಡಿದರೆ ಅದು ಸೂಪರ್ ಸ್ಟಾರ್ ರಜನಿ ಕಾಂತ್ ಅವರದ್ದಂತೆ!  ಹಾಗಂತ ಕಿಚ್ಚ ಟ್ವೀಟ್ ಮಾಡಿ ಹೇಳಿದ್ದಾರೆ.
ರಜನಿಕಾಂತ್ ಅವರ ಕರೆ ಅವರಲ್ಲಿ ಆಶ್ಚರ್ಯ ಉಂಟು ಮಾಡಿತಂತೆ. ಅದೊಂದು ಶುಭದಿನ ಎಂದು ಹೇಳಿದ್ದಾರೆ ಟ್ವೀಟಿಸಿ. ಅವರ ಪೋಸ್ಟ್ ನಲ್ಲಿ ಸೂಪರ್ ಸ್ಟಾರ್ ಎಂದು ಮಾತ್ರಹೇಳಿದ್ದಾರೆ, ಆದರೆ ಅವರ ಹೆಸರು ತಿಳಿಸಿಲ್ಲ, ಆದರೂ ಆ ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಎನ್ನುವ ಮಾತು ಸ್ಪಷ್ಟವಾಗಿದೆ. 
 
ನನಗೆ ಅತ್ಯಂತ ಆಶ್ಚರ್ಯಕರ ದಿನ. ನನ್ನ ಫೋನ್ ರಿಂಗ್ ಆಯ್ತು. ಅದು ಗೊತ್ತಿಲ್ಲದ ನಂಬರ್ ಆಗಿತ್ತು. ಯಾರು ಎಂದು ನೋಡಿದರೆ ಸೂಪರ್ ಸ್ಟಾರ್ ಖುದ್ದು ನನಗೆ ಫೋನಿಸಿದ್ದರು  ಒಳ್ಳೆಯ ಸಂಗತಿಗಳನ್ನು ಭದ್ರಪಡಿಸುವುದು ಸಂತಸದ ಸಂಗತಿ ಎಂದು ಖುಷಿ ಪಟ್ಟಿದ್ದಾರೆ.  ಸರಳತೆಯ ಮತ್ತೊಂದು ಹೆಸರು ರಜನಿಕಾಂತ್.ಅವರನ್ನು ನೋಡಿ ಸಾಕಷ್ಟು  ಕಲಿಯ ಬೇಕಿದೆ ಉಳಿದ ನಟರು. ಮತ್ತೊಂದು ಸಂಗತಿ ಈ ಕರೆ ಇವರಿಬ್ಬರು ಒಟ್ಟಿಗೆ ನಟಿಸುವ ಸಾಧ್ಯತೆಯನ್ನು ತಿಳಿಸುತ್ತಿದೆಯೇ? ಅದಿನ್ನು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.

Share this Story:

Follow Webdunia kannada