Select Your Language

Notifications

webdunia
webdunia
webdunia
webdunia

24 ಗಂಟೆಗಳಲ್ಲಿ ಲಿಂಗಾ ಡಬ್ಬಿಂಗ್ ಮಾಡಿ ದಾಖಲೆ ನಿರ್ಮಿಸಿದ ರಜನಿ ಕಾಂತ್

24  ಗಂಟೆಗಳಲ್ಲಿ ಲಿಂಗಾ ಡಬ್ಬಿಂಗ್ ಮಾಡಿ ದಾಖಲೆ ನಿರ್ಮಿಸಿದ  ರಜನಿ ಕಾಂತ್
, ಸೋಮವಾರ, 20 ಅಕ್ಟೋಬರ್ 2014 (13:31 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರು ಏನೇ ಮಾಡಲಿ ಭಿನ್ನತೆ ಇರುತ್ತದೆ. ಪ್ರಸ್ತುತ ರಜನಿ ಅವರು ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ ಲಿಂಗಾ ಚಿತ್ರದಲ್ಲಿ. ಈ ಚಿತ್ರ ಅವರ ಜನ್ಮದಿನದಂದೇ ಬಿಡುಗಡೆ ಆಗಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ. 
 
ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇದರ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಆದರೆ ಇಲ್ಲಿ ಸಹಿತ ರಜನಿಕಾಂತ್ ಅವರಿಗೆ ಸಂಬಂಧ ಪಟ್ಟಂತೆ ಒಂದು ರೋಚಕ  ಸಂಗತಿ ಇದೆ.. ಈ ಸೂಪರ್ ಸ್ಟಾರ್ ತಮ್ಮ ಭಾಗದ ಡಬ್ಬಿಂಗ್ ಕೇವಲ 24  ಗಂಟೆಗಳಲ್ಲಿ ಮಾಡಿ ಮುಗಿಸಿದ್ದಾರೆ. 
 
ರಜನಿ ಅವರು ತಮ್ಮ ಭಾಗದ ಡಬ್ಬಿಂಗ್ ನ್ನು 24  ಗಂಟೆಗಳ ಒಳಗೆ ಮಾಡಿ ಮುಗಿಸಿದರು, ಸಾಮಾನ್ಯವಾಗಿ ಡಬ್ಬಿಂಗ್ ಗೆ ಅವರು  ಒಂದಷ್ಟು ದಿನಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದರು . ಆದರೆ ಲಿಂಗಾ  ಡಬ್ಬಿಂಗ್ ನ್ನು  ಅತಿ ಶೀಘ್ರವಾಗಿ ಮಾಡಿ ಮುಗಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗ ಲಿಂಗಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.ಎರಡು ಹಾಡುಗಳ ಚಿತ್ರೀಕರಣ ಆಗ ಬೇಕಿದೆ. ಉಳಿದೆಲ್ಲ ಚಿತ್ರೀಕರಣ ಪೂರ್ಣವಾಗಿದೆ ಎಂದು ಹೇಳಿದ್ದಾರೆ 
 
ತಂಡದವರು. ಈ ಚಿತ್ರತಂಡ ಹಾಡುಗಳನ್ನು ಚಿತ್ರೀಕರಿಸಲು ಯುರೋಪ್ ಗೆ ಹೋಗುವ ಯೋಜನೆ ಹಾಕಿಕೊಂಡಿದ್ದಾರೆ. ಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶಿಸಿದ್ದಾರೆ. ಡ್ಯುಯೆಟ್ ರಜನಿ ಮತ್ತು ಸೋನಾಕ್ಷಿ ಸಿನ್ಹ  ನಟನೆಯಲ್ಲಿ ಚಿತ್ರೀಕರಣ ಆಗುತ್ತದೆ. ಚಿತ್ರದಲ್ಲಿ ರಜನಿಕಾಂತ್ ಅವರ ಜೊತೆ ಸೋನಾಕ್ಷಿ ಸಿನ್ಹ ಮತ್ತು ಅನುಷ್ಕ ಶೆಟ್ಟಿ ನಟಿಸಿದ್ದಾರೆ. 
 

Share this Story:

Follow Webdunia kannada