Webdunia - Bharat's app for daily news and videos

Install App

ಬಾಹುಬಲಿ 3 ಮಾಡ್ತಾರಾ ರಾಜಮೌಳಿ?

Webdunia
ಸೋಮವಾರ, 8 ಮೇ 2017 (08:08 IST)
ಹೈದರಾಬಾದ್: ಬಾಹುಬಲಿ 2 ಚಿತ್ರ 1000 ಕೋಟಿ ರೂ. ಬಾಚಿಕೊಂಡು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 
ಜನ ಬಾಹುಬಲಿ ಸಿನಿಮಾ ಬಗ್ಗೆ ಇಷ್ಟೊಂದು ಕ್ರೇಜ್ ಹೊಂದಿರುವಾಗ ರಾಜಮೌಳಿಗೆ ಮೂರನೇ ಭಾಗ ಮಾಡುವ ಆಸಕ್ತಿ ಬಂದಿದೆಯಾ? ಹೀಗೊಂದು ಪ್ರಶ್ನೆಯನ್ನು ಅವರಿಗೆ ಸಂದರ್ಶನವೊಂದರಲ್ಲಿ ಕೇಳಲಾಯ್ತು.

ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಹಾಗೂ ಅಮರೇಂದ್ರ ಬಾಹುಬಲಿಯ ಸಾವಿಗೆ ಮಗ ಮಹೇಂದ್ರ ಬಾಹುಬಲಿ ಸೇಡು ತೀರಿಸಿಕೊಳ್ಳುವ ಮೂಲಕ ಎರಡನೇ ಭಾಗ ಮುಕ್ತಾಯಗೊಂಡಿದೆ. ಇದೀಗ ಬಾಹುಬಲಿಗೆ ಒಂದು ರೀತಿಯ ಅಂತ್ಯ ಸಿಕ್ಕಿದೆ.

ಇನ್ನು ಮೂರನೇ ಭಾಗ ಮಾಡಬೇಕಾದರೆ ಅದಕ್ಕೊಂದು ಹೊಸ ಕತೆ ಹುಡುಕಬೇಕು. ಅದು ಅಷ್ಟು ಸುಲಭವಲ್ಲ ಎನ್ನುವುದು ರಾಮೌಳಿ ಮಾತು. ಹಾಗಿದ್ದರೂ ಒಂದು ವೇಳೆ ತಮ್ಮ ತಂದೆ ಬಾಹುಬಲಿ ಸಿನಿಮಾದದ ಕತೆಗಾರ ವಿಜಯೇಂದ್ರ ಪ್ರಸಾದ್ ಮೂರನೇ ಭಾಗಕ್ಕೆ ಸಶಕ್ತ ಕತೆ ಹೆಣೆದು ತಂದರೆ  ಬಾಹುಬಲಿ 3 ಬಂದರೂ ಅಚ್ಚರಿಯಿಲ್ಲ ಎಂದು ನಿರ್ದೇಶಕ ರಾಜಮೌಳಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments