Select Your Language

Notifications

webdunia
webdunia
webdunia
webdunia

ರಾಜ್ ಬಹದ್ದೂರು ಆಡಿಯೋ ರಿಲೀಸ್

ರಾಜ್ ಬಹದ್ದೂರು ಆಡಿಯೋ ರಿಲೀಸ್
, ಶುಕ್ರವಾರ, 4 ಸೆಪ್ಟಂಬರ್ 2015 (09:33 IST)
ವರ್ಷದ ಹಿಂದೆಯೇ ಹಾಡುಗಳ ಸಿಡಿ ಬಿಡುಗಡೆ ಮಾಡಿದ್ದ ರಾಜ್ ಬಹದ್ದೂರ್ ಮತ್ತೊಮ್ಮೆ ಆಡಿಯೋ ಬಿಡುಗಡೆ ಮಾಡಿ ಸಂಭ್ರಮ ಆಚಿರಿಸಿಕೊಂಡಿದೆ. ಆದ್ರೆ ಈಬಾರಿ ಆಡಿಯೋ ರಿಲೀಸ್ ನಲ್ಲಿ ಸಾಕಷ್ಟು ತಂತ್ರಜ್ಞಾನದ ಟಚ್ ಅಪ್ ಇತ್ತು. ಈ ಬಾರಿ 3ಡಿ 5.1 ಡಿಜಿಟಲ್ ರಸೌಂಡ್ ತಂತ್ರಜ್ಞಾನದಲ್ಲಿ ಹಾಡುಗಳನ್ನ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೆ ಆಡಿಯೋ ಬಿಡುಗಡೆ ವೇದಿಕೆಯಲ್ಲಿ ಟ್ರೈಲರ್ ಅನ್ನ ಕೂಡಾ ಪ್ರದರ್ಶನ ಮಾಡಿದ್ರು.
ಚಿತ್ರದ ಆಡಿಯೋ ರೀಲಾಂಚ್ ನಲ್ಲಿ ನಾಯಕನಟ ಗೋಲ್ಡನ್ ಸ್ಟಾರ್ ಗಣೇಶ್, ಚಿರಂಜೀವಿ ಸರ್ಜಾ, ಮೇಘನಾ ರಾಜ್, ಪಾವನಾ, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಸಾಕಷ್ಟು ಜನರಿದ್ರು. ಅಲ್ಲದೆ ಎಲ್ಲರೂ ಅಪ್ ಕಮಿಂಗ್ ಮೂವಿಗೆ ಶುಭಹಾರೈಸಿದ್ರು. ರಾಜ ಬಹದ್ದೂರ್ ಸಿನಿಮಾದಲ್ಲಿ ಐದು ಹಾಡುಗಳಿದ್ದು ಜೀವಿತ್ ಕೃಷ್ಣ ಮತ್ತು ರಘುಚರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. 
 
ಆಲ್ವಿನ್ ರಾಜ್ ಬಹದ್ದೂರ್ ಚಿತ್ರದ ನಿರ್ದೇಶಕರು. ಆಲ್ವಿನ್ ಗೆ ಇದು ಚೊಚ್ಚಲ ಸಂಭ್ರಮ. ಇನ್ನು ಚಿತ್ರದ ನಾಯಕ ಪುನೀತ್ ಫೈಟ್ ಮಾಸ್ಟರ್ ಕಂ ನಾಯಕ ಥ್ರಿಲ್ಲರ್ ಮಂಜು ಅವರ ಸಹೋದರನ ಪುತ್ರ. ಚಿತ್ರಕ್ಕೆ ನಾಯಕಿಯಾಗಿ ಶ್ರೀಶೃತಿ ಕಾಣಿಸಿಕೊಂಡಿದ್ದಾರೆ. 

Share this Story:

Follow Webdunia kannada