Webdunia - Bharat's app for daily news and videos

Install App

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

Krishnaveni K
ಶುಕ್ರವಾರ, 25 ಜುಲೈ 2025 (11:35 IST)
ಬೆಂಗಳೂರು: ಮಂಗಳೂರಿನ ಶೆಟ್ರು ಗ್ಯಾಂಗ್ ಸಿನಿಮಾ ಎಂದರೆ ಕನ್ನಡ ಪ್ರೇಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ. ಕಳೆದ ಒಂದೆರಡು ಸಿನಿಮಾಗಳಿಂದ ಮಂಕು ಹೊಡೆದಿದ್ದ ರಾಜ್ ಬಿ ಶೆಟ್ಟಿ ಈಗ ಕಮ್ ಬ್ಯಾಕ್ ಮಾಡಿದ್ದಾರೆ. ಅವರ ನಿರ್ಮಾಣದ ಸು ಫ್ರಮ್ ಸೊ ಸಿನಿಮಾ ಇಂದು ಬಿಡುಗಡೆಯಾಗಿದ್ದು ಭರ್ಜರಿ ಸೌಂಡ್ ಮಾಡುತ್ತಿದೆ.

ಸು ಫ್ರಮ್ ಸೊ ಸಿನಿಮಾ ರಾಜ್ ಬಿ ಶೆಟ್ಟಿ ನಿರ್ಮಾಣ ಮಾತ್ರವಲ್ಲ, ಈ ಸಿನಿಮಾದಲ್ಲಿ ಅವರು ವಿಶೇಷ ಪಾತ್ರದಲ್ಲೂ ನಟಿಸಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಹಾಸ್ಯ ಕಲಾವಿದರ ದಂಡೇ ಈ ಸಿನಿಮಾದಲ್ಲಿ ನಟಿಸಿದೆ. ಪಕ್ಕಾ ಮಂಗಳೂರು ಶೈಲಿಯ ಕನ್ನಡ, ಅಲ್ಲಿನ ಲೋಕಲ್ ಕಲಾವಿದರು ಸೇರಿಕೊಂಡು ಭರಪೂರ ಮನರಂಜನೆ ಒದಗಿಸುತ್ತಾರೆ.

ಅಂದ ಹಾಗೆ ಈ ಸಿನಿಮಾದಲ್ಲಿ ಸ್ಟಾರ್ ಯಾರು ಹುಡುಕಿದರೆ ಸಿಗಲ್ಲ. ಇಲ್ಲಿ ಕತೆಯೇ ನಾಯಕ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಪ್ರೇಕ್ಷಕರೆಲ್ಲರೂ ಸ್ಟಾರ್ ಗಳೇ. ಪ್ರಕಾಶ್ ತುಮಿನಾಡ್, ಜೆಪಿ ತುಮಿನಾಡ್, ಶನೀಲ್ ಗೌತಮ್ ಸೇರಿದಂತೆ ಹಾಸ್ಯ ಕಲಾವಿದರ ದಂಡೇ ಸಿನಿಮಾದಲ್ಲಿದೆ.

ಇದು ಒಂದು ಊರಿನಲ್ಲಿ ನಡೆಯುವ ಸಾಮಾನ್ಯರ ಕತೆ. ಮೊದಲಾರ್ಧ ಬರೀ ತಮಾಷೆಯಲ್ಲೇ ಸಾಗುತ್ತದೆ. ಏನೂ ಕತೆಯಿಲ್ವಾ ಎನ್ನುವಾಗ ಇಂಟ್ರೆಸ್ಟಿಂಗ್ ಕಹಾನಿಯೊಂದು ನಿಮ್ಮ ಮುಂದೆ ತೆರೆಯುತ್ತದೆ. ಹಾಗೇ ಆರಾಮವಾಗಿ ಸಾಗುತ್ತಿರುವ ಊರಿನೊಳಗೆ ಸುಲೋಚನಾ ದೆವ್ವವಾಗಿ ಊರಿಗೆ ಸೇರುತ್ತಾಳೆ. ಹಾಗಂತ ದೆವ್ವ ಎಂದು ಮಾಮೂಲು ಹಾರರ್ ರೇಂಜ್ ಗೆ ಯೋಚನೆ ಮಾಡಬೇಡಿ. ಇಲ್ಲೂ ನಿರ್ದೇಶಕರು ಹಾಸ್ಯದ ಟಚ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡದಲ್ಲಿ ಇಂತಹದ್ದೊಂದು ಸಿನಿಮಾ ಬಂದು ಎಷ್ಟೋ ದಿನಗಳೇ ಆಗಿವೆ. ಆರಂಭದಲ್ಲಿ ಇರುವ ನಗು ಪ್ರೇಕ್ಷಕರ ಮುಖದಲ್ಲಿ ಕೊನೆಯವರೆಗೂ ಇರಲಿದೆ. ಡಬಲ್ ಮೀನಿಂಗ್ ಸಂಭಾಷಣಗಳಿಲ್ಲದೆಯೂ ಪ್ರೇಕ್ಷಕರಿಲ್ಲದೆಯೂ ಪ್ರೇಕ್ಷಕರನ್ನು ನಗಿಸುವುದು ಹೇಗೆ ಎಂದು ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್ ಗೆ ಚೆನ್ನಾಗಿ ಕರಗತವಾಗಿದೆ. ಇದನ್ನು ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರ ಸಿನಿಮಾದಲ್ಲೂ ತೋರಿಸಿಕೊಟ್ಟಿದ್ದಾರೆ. ಜೆಪಿ ತುಮಿನಾಡ್ ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೊಸ ನಿರ್ದೇಶಕ ಎಂದು ನಿಮಗೆ ಅನಿಸುವುದೇ ಇಲ್ಲ. ಪ್ರತೀ ದೃಶ್ಯವನ್ನೂ ಇದು ಅನಗತ್ಯ ಎಂದು ಅನಿಸದೇ ಇರುವ ರೀತಿಯಲ್ಲಿ ನಿರ್ದೇಶನ ಮಾಡಿದ್ದಾರೆ. ಬಹಳ ದಿನಗಳ ನಂತರ ಕುಟುಂಬ ಸಮೇತ ನೋಡಬಹುದಾದ ಸಿನಿಮಾವೊಂದು ಕನ್ನಡದಲ್ಲಿ ಬಂದಿದೆ. ತಪ್ಪದೇ ನೋಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ರಾಜಕೀಯ ಭವಿಷ್ಯದಲ್ಲಿ ಹೊಸ ಮೈಲಿಗಲ್ಲಿನ ಹೆಜ್ಜೆಯಿಟ್ಟ ನಟ ಕಮಲ್ ಹಾಸನ್‌‌‌

ಪಾದ ಪೂಜೆ ನೆರವೇರಿಸಿ, ನನ್ನ ಗಂಡ ಮಿಲಿಯನ್‌ಗೊಬ್ಬ ಎಂದ ಸೋನಲ್, ನಟಿಗೆ ಸಂಪ್ರದಾಯದ ಮೇಲಿನ ಗೌರವಕ್ಕೆ ಫ್ಯಾನ್ಸ್‌ ಫಿದಾ

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

ಮುಂದಿನ ಸುದ್ದಿ
Show comments