Webdunia - Bharat's app for daily news and videos

Install App

ನಾವು ಇನ್ಮುಂದೆ ಪರಸ್ಪರ ನೋಡಲ್ಲ: ಮಮ್ಮುಟ್ಟಿಗೆ ಖಡಕ್ ಡೈಲಾಗ್ ಹೊಡೆದ ರಾಜ್ ಬಿ ಶೆಟ್ಟಿ

Krishnaveni K
ಸೋಮವಾರ, 13 ಮೇ 2024 (14:03 IST)
ಕೊಚ್ಚಿ: ಕನ್ನಡ ನಟ ರಾಜ್ ಬಿ ಶೆಟ್ಟಿ ಈಗ ಮಲಯಾಳಂ ಸಿನಿಮಾ ರಂಗದಲ್ಲಿ ಖಡಕ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮಮ್ಮುಟ್ಟಿ ನಾಯಕರಾಗಿರುವ ಟರ್ಬೋ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

ಟರ್ಬೋ ಸಿನಿಮಾವನ್ನು ಸ್ವತಃ ಮಮ್ಮುಟ್ಟಿಯೇ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ಟ್ರೈಲರ್ ನಿನ್ನೆ ಲಾಂಚ್ ಆಗಿದೆ. ಟ್ರೈಲರ್ ನೋಡಿದರೆ ಇದು ಸಖತ್ ಆಕ್ಷನ್ ಸಿನಿಮಾ ಎನ್ನುವುದು ಪಕ್ಕಾ ಆಗುತ್ತದೆ. ಈ ಸಿನಿಮಾದ ಟ್ರೈಲರ್ ನಲ್ಲಿ ಮಮ್ಮುಟ್ಟಿ ಜೊತೆಗೆ ಗಮನ ಸೆಳೆದಿದ್ದು ರಾಜ್ ಬಿ ಶೆಟ್ಟಿ ರೋಲ್.

ರಾಜ್ ಬಿ ಶೆಟ್ಟಿ ಕನ್ನಡದಲ್ಲಿ ಹಾಸ್ಯ ಪಾತ್ರ ಇಲ್ಲವೇ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಮಲಯಾಳಂ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡುತ್ತಿದ್ದಾರೆ. ವಿಲನ್ ಎಂದರೆ ಮೈಕಟ್ಟು ಹೊಂದಿರಬೇಕು, ಕಂಚಿನ ಕಂಠವಿರಬೇಕು ಎಂಬೆಲ್ಲಾ ಫಾರ್ಮುಲಾಗಳು ಇಂದಿನ ಸಿನಿಮಾಗಳಲ್ಲಿ ಇಲ್ಲ.

ಇದೀಗ ರಾಜ್ ಬಿ ಶೆಟ್ಟಿ ಚಿತ್ರದ ಪ್ರಮುಖ ವಿಲನ್ ಆಗಿ ಪಾತ್ರ ಮಾಡುತ್ತಿದ್ದಾರೆ. ಮಮ್ಮುಟ್ಟಿ ಹೆಗಲ ಮೇಲೆ ಕೈಯಿಟ್ಟು, ‘ನಾನು ಸೀ ಯೂ ಸೂನ್ ಅನ್ನಲ್ಲ, ಯಾಕೆಂದರೆ ನಾವು ಇನ್ನು ಮುಂದೆ ಪರಸ್ಪರ ಕಾಣಲ್ಲ’ ಎನ್ನುತ್ತಾರೆ. ಅವರ ಈ ಮಾಸ್ ಡೈಲಾಗ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಸಿನಿಮಾ ರಾಜ್ ಬಿ ಶೆಟ್ಟಿಗೆ ಪರಭಾಷೆಗಳಲ್ಲಿ ಬೇರೊಂದು ಇಮೇಜ್ ತಂದುಕೊಡುವ ವಿಶ್ವಾಸವಿದೆ. ಮೇ 23 ಕ್ಕೆ ಟರ್ಬೋ ಸಿನಿಮಾ ಥಿಯೇಟರ್ ಗೆ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

ಮುಂದಿನ ಸುದ್ದಿ
Show comments