Select Your Language

Notifications

webdunia
webdunia
webdunia
webdunia

ರಣಚಂಡಿ ಯಲ್ಲಿ ರಾಗಿಣಿ ಬೈಕ್ ರೈಡ್ ಮಾಡಿದ್ದಾರಂತೆ!

ರಣಚಂಡಿ ಯಲ್ಲಿ ರಾಗಿಣಿ ಬೈಕ್ ರೈಡ್   ಮಾಡಿದ್ದಾರಂತೆ!
, ಶುಕ್ರವಾರ, 18 ಜುಲೈ 2014 (11:23 IST)
ಅಮ್ಮ, ಪರಪಂಚ ಚಿತ್ರಗಳಲ್ಲಿ ನಟಿಸುತ್ತಿರುವ ರಾಗಿಣಿಯು ಆಕ್ಷನ್ ಚಿತ್ರದಲ್ಲೂ ಸಹ ತನ್ನ ಛಾಪು ತೋರಿರುವ ಚೆಲುವೆ.  ರಾಗಿಣಿ ಐಪಿಎಸ್ ನಂತರ ಅವರು ನಟಿಸುತ್ತಿರುವ ಮತ್ತೂಂದು ಆಕ್ಷನ್ ಚಿತ್ರ ವೀರ ರಣಚಂಡಿ. ಈ ಚಿತ್ರದಲ್ಲಿ   ರಾಗಿಣಿ ಬೈಕ್ ಓಡಿಸ್ತಾ ಇದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ವೀಲಿಂಗ್ ಮಾಡಿ ತಾವೆಷ್ಟು ಎದೆಗಾರ್ತಿ ಎನ್ನುವುದನ್ನು ಸಹ ತೋರಿಸಿದ್ದಾರೆ! 
 
ವೀರ ರಣಚಂಡಿ  ಚಿತ್ರವನ್ನು  ರಾಗಿಣಿ ಐಪಿಎಸ್  ನಿರ್ದೇಶಿಸಿದ ಆನಂದ್ ಪಿ ರಾಜು ಅವರೇ ನಿರ್ದೇಶಿಸುತ್ತಾ ಇದ್ದಾರೆ.  ಇನ್ನು ಈ ಚಿತ್ರ ಟೈಟಲ್  ಓಕೆ ಆಗಿಲ್ಲ, ಆದರೂ ಆನಂದ್ ರಾಜು ಈ ಹೆಸರಿನಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ನಾಯಕಿಯನ್ನು ನಾಯಕನ ರೇಂಜ್ ನಲ್ಲಿ ತೋರಿಸುವ ಇರಾದೆ ಹೊಂದಿದ್ದಾರೆ ನಿರ್ದೇಶಕರು. ಅದಕ್ಕಾಗಿ ಅವರು  ಹಯಾಬುಜಾ ಬೈಕ್ ತರಿಸಿ, ನೈಸ್ ರಸ್ತೆಯಲ್ಲಿ ರಾಗಿಣಿ ಕೈಗೆ ಕೊಟ್ಟಿದ್ದಾರೆ. ಅದರ ಮೇಲೆ ಸವಾರಿ ಮಾಡಿದ ರಾಗಿಣಿ ಚೆನ್ನಾಗಿ ಪಳಗಿಸಿದ್ದಾರೆ ಬೈಕನ್ನು . ಚಿತ್ರೀಕರಣ ಆರಂಭವಾಗಿದ್ದು, ಶರತ್ ಲೋಹಿತಾಶ್ವ, ರಮೇಶ್ ಭಟ್, ನಾಗಶೇಖರ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.ಇದು ರಾಗಿಣಿ ಅವರ ಎರಡನೇ ಸಾಹಸಭರಿತ ಚಿತ್ರ!

Share this Story:

Follow Webdunia kannada