Select Your Language

Notifications

webdunia
webdunia
webdunia
webdunia

ಟ್ವಿಟ್ಟರ್ ನಲ್ಲಿ ತನ್ನ ಲವ್ ವಿಷಯದ ಬಗ್ಗೆ ಹಂಚಿಕೊಂಡ ರಾಗಿಣಿ

ಟ್ವಿಟ್ಟರ್ ನಲ್ಲಿ ತನ್ನ ಲವ್  ವಿಷಯದ  ಬಗ್ಗೆ ಹಂಚಿಕೊಂಡ ರಾಗಿಣಿ
, ಗುರುವಾರ, 23 ಜುಲೈ 2015 (10:04 IST)
ನಾವು ಈಗ ಹೇಳ ಹೊರಟಿರುವುದು  ಬೇರೆ ಸಂಗತಿ ಬಗ್ಗೆ. ನೀವು ಶೀರ್ಷಿಕೆ  ಓದಿ ಮತ್ತೇನೋ ಕಲ್ಪಿಸಿ ಕೊಳ್ಳದಿರಿ ಪ್ರಿಯ ಓದುಗರೇ. ನಟಿ ರಾಗಿಣಿ ದ್ವಿವೇದಿ ಹಾಗೂ ಪ್ರಿಯಾಮಣಿ ಸಮಕಾಲಿನ ನಟಿಮಣಿಯರು . ಅವರು ಎಲ್ಲ ಭಾಷೆಯ ಚಿತ್ರರಂಗದಲ್ಲಿ ಓಡಾಡಿ ಬಂದವರು. ಒಳ್ಳೆಯ ಸ್ನೇಹ ಹೊಂದಿರುವ ಈ ತಾರೆಯರು ತಮ್ಮ ಪ್ರೀತಿಯನ್ನು ಟ್ವಿಟ್ಟರ್  ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. 
ಭಾರತೀಯ ಮದುವಣಗಿತ್ತಿಯಂತೆ ಸಿದ್ಧವಾಗಿ ತೆಗೆಸಿಕೊಂಡ ಫೋಟೋ ಪ್ರಿಯಾಮಣಿ ತನ್ನ ಪೇಜ್ ನಲ್ಲಿ ಹಾಕಿದ್ದರು. ಅದನ್ನು ನೋಡಿ ಆನಂದ ಪಟ್ಟ ರಾಗಿಣಿ ನೀನು ಹಾಕಿದ ಚಿತ್ರ ಈಗಷ್ಟೇ ಕಂಡೆ ಎಷ್ಟು ಮುದ್ದಾಗಿದ್ದಿಯೇ ನನ್ ತಾಯಿ ಎನ್ನುವ ಅರ್ಥ ಬರುವಂತೆ ಟ್ವೀಟಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಆಕೆ ಅಂದರೆ ಪ್ರಿಯಾಮಣಿ ಥ್ಯಾಂಕ್ಸ್ ಲವ್ ಎಂದು ಉತ್ತರಿಸಿದ್ದಾರೆ. ಹೀಗೆ ಒಬ್ಬರಿಗೊಬ್ಬರು ತಮ್ಮ  ಪ್ರೀತಿಯನ್ನು ಹಂಚಿಕೊಂಡಿದ್ದಾರೆ ಎನ್ನುವುದರೊಂದಿಗೆ ರಾಗಿಣಿ ಪ್ರೇಮ ಸಂಗತಿ ಇಲ್ಲಿಗೆ ಮುಕ್ತಾಯವಾಗುತ್ತದೆ.ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿರುವ ಪ್ರಿಯಾಮಣಿ ಡ್ಯಾನ್ಸಿಂಗ್ ಸ್ಟಾರ್ ಜೂನಿಯರ್ಸ್ ನಲ್ಲಿ ನಟ ರವಿಚಂದ್ರನ್, ಮಯೂರಿ ಉಪಾಧ್ಯ ಅವರ ಜೊತೆ ತೀರ್ಪು ನೀಡುತ್ತಿದ್ದಾರೆ.  ಜಾಸ್ತಿ ಇಂಗ್ಲೀಷ್ ಜೊತೆ ಸ್ವಲ್ಪ ಕನ್ನಡ ಮಾತಾಡುತ್ತ ಕನ್ನಡಿಗರನ್ನು ರಂಜಿಸುತ್ತಿದ್ದಾರೆ.

Share this Story:

Follow Webdunia kannada