Select Your Language

Notifications

webdunia
webdunia
webdunia
webdunia

ಇಳಯ ದಳಪತಿಯಲ್ಲಿ ಮುಖ್ಯ ಪಾತ್ರಧಾರಿ ರಾಧಿಕಾ ಶರತ್ ಕುಮಾರ್ ?!

ಇಳಯ ದಳಪತಿಯಲ್ಲಿ ಮುಖ್ಯ ಪಾತ್ರಧಾರಿ ರಾಧಿಕಾ ಶರತ್ ಕುಮಾರ್ ?!
, ಮಂಗಳವಾರ, 31 ಮಾರ್ಚ್ 2015 (10:18 IST)
ಕನ್ನಡದಲ್ಲಿ ದಿ. ವಿಷ್ಣುವರ್ಧನ್ ಅವರ ಜೊತೆ ನಟಿಸಿದ್ದ ದಕ್ಷಿಣ ಭಾರತದ ಬಹುಭಾಷ ನಟಿ ರಾಧಿಕ ಶರತ್ ಕುಮಾರ್ ಈಗ ತಮಿಳಿನ ಇಳಯದಳಪತಿ ಎನ್ನುವ ಬಿರಿದು ಪಡೆದಿರುವ ವಿಜಯ್ ಅವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. 
ಈಕೆ ಅವರ ಚಿತ್ರದಲ್ಲಿ ಮುಖ್ಯ ಪಾತ್ರಧಾರಿ ಆಗಿದ್ದಾರೆ. ರಾಧಿಕ ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ವಿಜಯ್ ಕಾಂತ್ ರಂತಹ ಹೀರೋಗಳ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೆ ಕಾರ್ತಿ, ವಿಶಾಲ್ ರಂತಹ ಕಿರಿಯ ಕಲಾವಿದರ ಜೊತೆಯಲ್ಲಿ ಈ ಹಿರಿಯ ನಟಿ ನಟಿಸಿದ್ದಾರೆ. ಆದರೆ ಈವರೆಗೂ ನಟ ವಿಜಯ್ ಅವರ ಜೊತೆ ಅಭಿನಯಿಸಿರಲಿಲ್ಲ. ಈ ಜೋಡಿಯ ಚಿತ್ರ ಸಧ್ಯದಲ್ಲೇ ಒಟ್ಟಿಗೆ ನಟಿಸುವ ಕೆಲಸದಲ್ಲಿ ಮಗ್ನರಾಗಲಿದ್ದಾರೆ. ಪ್ರಸಿದ್ಧ ನಿರ್ಮಾಪಕ, ನಿರ್ದೇಶಕ ಮಂಡಳಿಯ ಅಧ್ಯಕ್ಷರಾದ ಕಲೈಪುಲಿ ಎಸ್ ಥಾನು ಅವರು ನಿರ್ಮಿಸುತ್ತಿರುವ ಚಿತ್ರದಲ್ಲಿ ವಿಜಯ್ ಜೊತೆ ಆಕೆ ನಟಿಸುತ್ತಿದ್ದಾರೆ. ಇದರಲ್ಲಿ ಸಮಂತ ನಾಯಕಿ ಆಗಿದ್ದಾಳೆ.  
 
ವಿಜಯ್ ಮತ್ತು ಸಮ್ಮು ಈಗಾಗಲೇ ಕತ್ತಿ ಚಿತ್ರದಲ್ಲಿ ನಟಿಸಿ ಗೆದ್ದಿದ್ದಾರೆ. ಕಲೈ ಪುಲಿ ಥಾನು ಅವರು ಈಗಾಗಲೇ ವಿಜಯ್ ಅವರ ಅಭಿನಯದ ತುಪಾಕಿ ಚಿತ್ರವನ್ನು ನಿರ್ಮಿಸಿ ಗೆದ್ದಿದ್ದಾರೆ. ಈಗ ಈ ಎಲ್ಲ ಯಶಸ್ವಿ ಜೋಡಿಗಳು ಒಂದಾಗಿವೆ. ಈ ಮೂಲಕ ಮತ್ತೊಂದು ಯಶಸ್ವಿ ಚಿತ್ರದ ನಿರ್ಮಾಣದತ್ತ ಸಿದ್ಧತೆ ನಡೆಸಿದ್ದಾರೆ. ರಾಜರಾಣಿ ಚಿತ್ರದ ಮೂಲಕ ಯಶಸ್ಸಿನ ಸವಿ ಕಂಡ ಯುವ ನಿರ್ದೇಶಕ ಅಟ್ಲಿ ಈಕ್ರೆಜ ಅವರು ನಿರ್ದೇಶನ ಹೊಣೆ ಹೊತ್ತಿದ್ದಾರೆ. ಅಂತಹ ಚಿತ್ರದಲ್ಲಿ ರಾಧಿಕ ಶರತ್ ಕುಮಾರ್ ಸಹ ಮುಖ್ಯ ಪಾತ್ರಧಾರಿಯಾಗಿ ಕಾಣುತ್ತಿದ್ದಾರೆ ಎನ್ನುವುದೇ ಈಗ ನಾವು ತಿಳಿಸಿದ ಮುಖ್ಯ ಸಂಗತಿ ಆಗಿದೆ. 

Share this Story:

Follow Webdunia kannada