Webdunia - Bharat's app for daily news and videos

Install App

ನನ್ನ ನಗ್ನ ದೇಹ ವೀಕ್ಷಿಸುವುದಕ್ಕಿಂತ ಕನ್ನಡಿ ಮುಂದೆ ನಿಂತು ನಿನ್ನ ನಗ್ನ ದೇಹ ನೋಡಿಕೋ: ರಾಧಿಕಾ ಆಪ್ಟೆ

Webdunia
ಬುಧವಾರ, 5 ಅಕ್ಟೋಬರ್ 2016 (16:34 IST)
ಬಾಲಿವುಡ್ ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸುವ ಹಾಟ್ ನಟಿ ರಾಧಿಕಾ ಆಪ್ಟೆ, ನಿಜ ಜೀವನದಲ್ಲೂ ತುಂಬಾ ಬೋಲ್ಡ್. ಯಾವುದೇ ವಿಷಯದ ಬಗ್ಗೆ ಬೋಲ್ಡ್ ಆಗಿ ಪ್ರತಿಕ್ರಿಯೆ ನೀಡುವಲ್ಲಿ ಕೂಡಾ ಕುಖ್ಯಾತಿಯನ್ನು ಪಡೆದಿದ್ದಾಳೆ.
ಮುಂಬೈನಲ್ಲಿ ಆಯೋಜಿಸಲಾದ ಸ್ವಚ್ಚ ಭಾರತ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ನಟಿ ಆಪ್ಟೆ, ಪತ್ರಕರ್ತನೊಬ್ಬನ ಪ್ರಶ್ನೆಗೆ ಬೋಲ್ಡ್ ಆಗಿ ಉತ್ತರಿಸಿ ಪಕ್ಕದಲ್ಲಿದ್ದ ಅತಿಥಿಗಳನ್ನು ಬೆಚ್ಚಿ ಬೀಳಿಸಿದ್ದಾಳೆ.
 
ಪ್ರತಿ ಬಾರಿ ನಿಮ್ಮ ಚಿತ್ರ ಬಿಡುಗಡೆಯಾಗುವ ಮುಂಚೆ ಕೆಲ ನಗ್ನದೃಶ್ಯಗಳ ವಿಡಿಯೋ ಯಾಕೆ ಬಿಡುಗಡೆಯಾಗುತ್ತದೆ. ನೀವು ಇದನ್ನು ಪ್ರಚಾರ ಪಡೆಯಲು ಇಂತಹ ವಿಡಿಯೋ ಬಿಡುಗಡೆಗೊಳಿಸುತ್ತೀರಾ ಎನ್ನುವ ಪತ್ರಕರ್ತನ ಪ್ರಶ್ನೆ ಆಕೆಗೆ ಆಕ್ರೋಶ ಮೂಡಿಸಿದೆ.
 
ಶಿವಾಯ್ ಚಿತ್ರ ಬಿಡುಗಡೆಯಾಗುವ ಮುನ್ನವೇ ಕೆಲ ನಗ್ನ ದೃಶ್ಯಗಳಿರುವ ವಿಡಿಯೋ ಬಿಡುಗಡೆಯಾಗಿದ್ದರಿಂದ ಅಸಮಾಧಾನಗೊಂಡಿದ್ದ ರಾಧಿಕಾ ಆಪ್ಟೆ, ಪತ್ರಕರ್ತನ ಪ್ರಶ್ನೆಯಿಂದ ಮತ್ತಷ್ಟು ಅಸಮಾಧಾನಗೊಂಡು, ಗೆಳೆಯನೇ ನಿನ್ನ ಪ್ರಶ್ನೆ ಹಾಸ್ಯಾಸ್ಪದವಾಗಿದೆ. ನೀನು ವಿಡಿಯೋ ನೋಡಿ, ಅದನ್ನು ಶೇರ್ ಮಾಡಿ, ಇದೀಗ ವಿವಾದವನ್ನು ಸೃಷ್ಟಿಸಲು ಬಯಸುತ್ತೀರಾ? ನಾನೊಬ್ಬಳು ನಟಿಯಾಗಿ ಚಿತ್ರಕಥೆಗೆ ಅಗತ್ಯವಾಗಿರುವಂತೆ ನಟಿಸುತ್ತೇನೆ ಎಂದು ತಿರುಗೇಟು ನೀಡಿದ್ದಾಳೆ.
    
ಅಷ್ಟಕ್ಕೂ ಸುಮ್ಮನಾಗದ ನಟಿ ರಾಧಿಕಾ, ಹಾಲಿವುಡ್ ಅಥವಾ ಅಂತಾರಾಷ್ಟ್ರೀಯ ಸಿನೆಮಾಗಳಲ್ಲಿ ಏನು ನಡೆಯುತ್ತಿದೆ ಎನ್ನುವುದು ನೀನು ನೋಡಿದ್ದಲ್ಲಿ ಇಂತಹ ಪ್ರಶ್ನೆ ಕೇಳುತ್ತಿರಲಿಲ್ಲ. ಯಾರಿಗೆ ತಮ್ಮ ದೇಹ ಸೌಂದರ್ಯದ ಬಗ್ಗೆ ಅಸಮಾಧಾನವಿರುತ್ತದೆಯೋ ಅವರು ಇತರರ ದೇಹ ಸೌಂದರ್ಯವನ್ನು ನೋಡುವ ಆಸಕ್ತಿ ಹೊಂದಿರುತ್ತಾರೆ. ಒಂದು ವೇಳೆ ನಿನಗೆ ನಗ್ನ ದೇಹ ನೋಡಬೇಕು ಎನ್ನುವ ಆಸೆಯಿದ್ದಲ್ಲಿ ನನ್ನ ವಿಡಿಯೋ ನೋಡುವುದು ಬಿಟ್ಟು ನಿನ್ನನ್ನು ನೀನು ನಗ್ನನಾಗಿ ಕನ್ನಡಿಯ ಮುಂದೆ ನಿಂತು ನೋಡಿಕೋ ಎಂದು ಸಲಹೆ ನೀಡಿದ್ದಾಳೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Operation Sindoor ಬಗ್ಗೆ ನಾಚಿಕೆಪಡಬೇಕು ಎಂದ ಕೇರಳದ ನಟಿ ಅಮೀನಾ ನಿಜಂ ಯಾರು

Amina Nijam: ಆಪರೇಷನ್ ಸಿಂಧೂರ್ ಮಾಡಿದ್ದಕ್ಕೆ ಮಲಯಾಳಂ ನಟಿ ಅಮಿನಾಗೆ ಭಾರತೀಯಳಾಗಿ ನಾಚಿಕೆಯಾಗ್ತಿದೆಯಂತೆ

Operation Sindoora: ಪವಿತ್ರ ಸಿಂಧೂರಕ್ಕೆ ಅಪಮಾನ ಮಾಡಿದವರಿಗೆ ತಕ್ಕ ಪಾಠ ಎಂದ ಕಿಚ್ಚ ಸುದೀಪ್

ಕಾಂತಾರ ಸಿನಿಮಾ ಶೂಟಿಂಗ್‌ನಲ್ಲಿದ್ದ ರಿಷಬ್‌ ಶೆಟ್ಟಿಗೆ ದೊಡ್ಡ ಶಾಕ್‌: ಸಹ ಕಲಾವಿದ ಸಾವು, ಆಗಿದ್ದೇನೂ

ನಿಮ್ಮನ್ನು ಬ್ಯಾನ್ ಮಾಡಿದ್ರೆ ಕೆಎಫ್‌ಐಗೆ ‌ನಷ್ಟ: ಸೋನು ನಿಗಮ್‌ಗೆ ಬೆಂಬಲ ಸೂಚಿಸಿದ ಕನ್ನಡ ನಟಿಗೆ ತರಾಟೆ

ಮುಂದಿನ ಸುದ್ದಿ