Select Your Language

Notifications

webdunia
webdunia
webdunia
webdunia

ರಜನಿಕಾಂತ್ ಜೊತೆ ನಟಿಸಲು ಅವಕಾಶ ಪಡೆದ ರಾಧಿಕಾ ಆಪ್ಟೆ

ರಜನಿಕಾಂತ್ ಜೊತೆ ನಟಿಸಲು ಅವಕಾಶ ಪಡೆದ ರಾಧಿಕಾ ಆಪ್ಟೆ
, ಬುಧವಾರ, 5 ಆಗಸ್ಟ್ 2015 (10:03 IST)
ಸೂಪರ್ ರಜಿನಿಕಾಂತ್. ಬಹುಭಾಷೆಗಳಲ್ಲಿ ನಟಿಸಿ ವಿಷ್ವದಾದ್ಯಂತ ಹೆಸರು ಮಾಡಿದ ನಟ.ಇಂತಹ ಮಹಾನ್ ನಟನೊಂದಿಗೆ ನಟಿಸೋದು ಅಂದ್ರೆ ಅದೆಷ್ಟೋ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಅದ್ರಲ್ಲೂ ಹೊಸ ಪ್ರತಿಭೆಗಳಿಗೆ ಇವರ ಜೊತೆ ನಟಿಸೋ ಅವಕಾಶ ಸಿಕ್ರೆ ಹೇಗಾಗಬೇಡ ಹೇಳಿ. ಇದೀಗ ಆ ಅವಕಾಶ ಬಾಲಿವುಡ್ ನಟಿ ರಾಧಿಕಾ ಆಪ್ಟೆಗೆ ಒದಗಿ ಬಂದಿದೆ.
ಈಗಾಗಲೇ ಸುಜೋಯ್ ಘೋಷ್ ಅವರ ಅಹಲ್ಯ ಶಾರ್ಚ್ ಫಿಲ್ಮಂನಲ್ಲಿ ಕಾಣಿಸಿಕೊಂಡಿರುವ ಅಹಲ್ಯಾಗೆ ಪ್ರಶಂಸೆಯ ಸುರಿ ಮಳೆಯೇ ಹರಿದು ಬರುತ್ತಿದೆ. ಹೀಗಿರುವಾಗಲೇ ಅಹಲ್ಯಾಗೆ ಮತ್ತೊಂದು ಸೌಭಾಗ್ಯ ಒಲಿದು ಬಂದಿದೆ. ಅದು ಸೂಪರ್ ಸ್ಟಾರ್ ರಜಿನಿಕಾತ್ ಜೊತೆ ನಟಿಸೋ ಚಾನ್ಸ್. ಈಗಾಗಲೇ ಬದ್ಲಾಪುರ್ ಹಂಟರ್ ಸಿನಿಮಾಗಳಲ್ಲಿ ನಟಿಸಿರುವರಾಧಿಕಾ ಆಪ್ಟೆಗೆ ಬಾಲಿವುಡ್ ಅಂಗಳದಲ್ಲಿ ಒಳ್ಳೆ ಹೆಸರಿದೆ. ಹೀಗಿರುವಾಗಲೇ ಈದೀಗ ಮತ್ತೊಂದು ಸುವರ್ಣಾಕಾಶ ಒದಗಿ ಬಂದಿದ್ದು ರಾಧಿಕಾಗೆ ಉಜ್ವಲ ಭವಿಷ್ಯವಿದೆ ಅನ್ನೋದು ಖಚಿತವಾಗಿದೆ.
 
ಇನ್ನು ಹಿಂದೆ ರಜಿನಿಕಾಂತ್ ಜೊತೆ ರೊಬೋಟ್ ಸಿನಾಮದಲ್ಲಿ ಐಶ್ವರ್ಯಾ ನಟಿಸಿದ್ದರು. ಇನ್ನು ಕೊಚಾಡಿಯನ್ ಸಿನಿಮಾದಲ್ಲಿ  ದೀಪಿಕಾ ಪಡುಕೋಣೆ ನಟಿಸಿದ್ದರು. ಲಿಂಗ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಟಿಸಿದ್ದರು. ಹೀಗಿರುವಾಗಲೇ ಇದೀಗ ರಾಧಿಕಾಗೆ ಅವಕಾಶ ಒದಗಿ ಬಂದಿದ್ದು ಅವರು ಫುಲ್ ಖುಷಿಯಾಗದ್ದಾರಂತೆ.

Share this Story:

Follow Webdunia kannada