Select Your Language

Notifications

webdunia
webdunia
webdunia
webdunia

ಪುನಿತ್ 'ಚಕ್ರವ್ಯೂಹ'ಕ್ಕೆ ಸಿಕ್ಕಿಬಿದ್ದ ಗುಳಿಗಲ್ಲದ ಚೆಲುವೆ ರಚಿತಾ ರಾಮ್

ಪುನಿತ್ 'ಚಕ್ರವ್ಯೂಹ'ಕ್ಕೆ ಸಿಕ್ಕಿಬಿದ್ದ ಗುಳಿಗಲ್ಲದ ಚೆಲುವೆ ರಚಿತಾ ರಾಮ್
, ಸೋಮವಾರ, 29 ಜೂನ್ 2015 (10:32 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರವನ್ನು ಶರವಣನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ಎನ್ಗೆಯುಂ ಎಪ್ಪುಡುಂ ಚಿತ್ರ  ಖ್ಯಾತಿಯ ಈ ನಿರ್ದೇಶಕ ಈಗ ಕನ್ನಡ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.ಇದೀಗ ಬಂದ ಸುದ್ದಿ ಏನೆಂದರೆ ಈ ಚಿತ್ರಕ್ಕೆ ಹೀರೋಯಿನ್ ಆಯ್ಕೆ ಆಗಿದ್ದಾರೆ. ಈ ಮೊದಲು ಪುನೀತ್ ಜೊತೆ ಪಂಜಾಬಿ ಮಾಡೆಲ್ ಆಯ್ಕೆ ಆಗಿದ್ದಾರೆ ನಟಿಸಲು ಎನ್ನುವ ವದಂತಿ ಹರಡಿತ್ತು. ಆದರೆ ಈಗ ಆ ಸುದ್ದಿ ತಿರುವು ಪಡೆದಿದೆ. ಅದು ಸುಳ್ಳೆನ್ನುವುದು ಸಾಬೀತಾಗಿದೆ. ಏಕೆಂದರೆ ನಾಯಕಿಯಾಗಿ ಗುಳಿಗಲ್ಲದ ಚೆಲುವೆ ರಚಿತರಾಂ ಆಯ್ಕೆ ಆಗಿದ್ದಾರೆ. ಈ ಸಂಗತಿ ಅಧಿಕೃತವಾಗಿ ಹೊರ ಬಂದಿದೆ. ರಣವಿಕ್ರಮ ಚಿತ್ರದಲ್ಲಿ ಆಯ್ಕೆ ಆಗಿದ್ದ ರಚಿತ,ಯಾವುದೋ ಕಾರಣದಿಂದ ಅದರಲ್ಲಿ ನಟಿಸಲಿಲ್ಲ. ಅದಾದ ಬಳಿಕ ಸುದೀಪ್ ಅವರ ಜೊತೆ ರನ್ನ ಚಿತ್ರದಲ್ಲಿ ನಟಿಸಿದ್ದರು. ಈಗ ಆಕೆ ಮತ್ತೆ ಪುನೀತ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರದ ಶೀರ್ಷಿಕೆ ಚಕ್ರವ್ಯೂಹ. 

Share this Story:

Follow Webdunia kannada