Select Your Language

Notifications

webdunia
webdunia
webdunia
webdunia

ಜಗ್ಗು ದಾದಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ರಚಿತಾ ಹಾಗೂ ಪ್ರಣೀತಾ

ಜಗ್ಗು ದಾದಾ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ರಚಿತಾ ಹಾಗೂ ಪ್ರಣೀತಾ
, ಶುಕ್ರವಾರ, 12 ಫೆಬ್ರವರಿ 2016 (11:29 IST)
ದರ್ಶನ್ ಅವರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿಯರಿಗೆ ಮುಂದೆ ಉತ್ತಮ ಅವಕಾಶವಿದೆ ಅನ್ನೋ ಮಾತುಗಳು ಈಗ ಗಾಂಧೀನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಅದಕ್ಕೆ ಸೂಕ್ತವಾದ ಉದಾಹರಣೆಗಳು ಕೂಡ ಸಿಗುತ್ತಿವೆ.

 
ಹೌದು.. ದರ್ಶನ್ ಅವರ ಪೊರ್ಕಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟಿ ಪ್ರಣಿತಾ ಸುಭಾಷ್. ದರ್ಶನ್ ಜೊತೆ ಅಭಿನಯಿಸಿದ್ದೇ ತಡ ಅವರಿಗೆ ಪರ ಭಾಷಾ ಸಿನಿಮಾಗಳಿಂದಲೂ ಭರ್ಜರಿ ಅವಕಾಶಗಳು ಬಂದವು. ಪವನ್ ಕಲ್ಯಾಣ್, ಜೂನಿಯರ್ ಎನ್ ಟಿಆರ್ ಮುಂತಾದ ಮಹಾನ್ ನಟರೊಂದಿಗೆ ಅಭಿನಯಿಸಿದ್ದಾರೆ.
 
ಇನ್ನು ದರ್ಶನ್ ಅವರ ಬುಲ್ ಬುಲ್ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ರಚಿತಾ ರಾಮ್ ಅವರದ್ದೂ ಇದೇ ಕಥೆ. 
ಬುಲ್ ಬುಲ್ ಬಳಿಕ ಅವರು ಸುದೀಪ್, ಪುನೀತ್ ರಾಜ್ ಕುಮಾರ್, ಧ್ರುವ ಸರ್ಜಾ , ಮುರಳಿ ಮುಂತಾದ ನಟರೊಂದಿಗೆ ನಟಿಸೋ ಅವಕಾಶ ಪಡೆದ್ರು. ದೀಪಾ ಸನ್ನಿಧಿ ಕೂಡ ಸಾರಥಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಬಂದು ಬಳಿಕ ಪುನೀತ್ ರಾಜ್ ಕುಮಾರ್ ಹಾಗೇ ಟಾಲಿವುಡ್ ನಲ್ಲೂ ಅವಕಾಶ ಪಡೆದ್ರು. ಇದನ್ನೆಲ್ಲಾ ನೋಡುತ್ತಿದ್ರೆ  ಈ ಮಾತು ನಿಜ ಅನ್ನಿಸುತ್ತೆ.
 
ಈ ಹಿಂದೆ ದರ್ಶನ್ ಅವರ ಸಿನಿಮಾದಲ್ಲಿ ಅಭಿನಯಿಸಿದ್ದ ಪ್ರಣೀತಾ ಹಾಗೂ ರಚಿತಾ ರಾಮ್ ಮತ್ತೆ ದರ್ಶನ್ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ದರ್ಶನ್ ಅವರ ಮುಂದಿನ ಸಿನಿಮಾ ಜಗ್ಗುದಾದದಲ್ಲಿ ಈ ಇಬ್ಬರೂ ನಟಿಯರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಮತ್ತೆ ಹಳೆ ಜೋಡಿಯನ್ನು ತೆರೆ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗೆ ದೊರಕಲಿದೆ.

Share this Story:

Follow Webdunia kannada