Select Your Language

Notifications

webdunia
webdunia
webdunia
webdunia

ಸುಬ್ಬನ ಸುಬ್ಬಿಯಾಗಿ ಪುಟ್ಟಗೌರಿ ರಂಜಿನಿ

ಸುಬ್ಬನ ಸುಬ್ಬಿಯಾಗಿ ಪುಟ್ಟಗೌರಿ ರಂಜಿನಿ
ಬೆಂಗಳೂರು , ಶನಿವಾರ, 12 ನವೆಂಬರ್ 2016 (10:54 IST)
ಬೆಂಗಳೂರು:  ಪುಟ್ಟಗೌರಿ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ರಂಜಿನಿ ರಾಘವನ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಅದರ ಹೆಸರು ಸುಬ್ಬ ಮತ್ತು ಸುಬ್ಬಿ. ಇಲ್ಲಿ ಸುಬ್ಬಿ ಪಾತ್ರ ರಂಜಿನಿಯದ್ದು. ಸುಬ್ಬಿಯ ಸುಬ್ಬನ ಪಾತ್ರ ಮಾಡುತ್ತಿರುವವರು ಸಾ ರಾ ಗೋವಿಂದು ಪುತ್ರ ಅನೂಪ್ ಸಾ ರಾ ಗೋವಿಂದು.

ಇದು ಪುಟ್ಟಗೌರಿಯ ಎರಡನೇ ಸಿನಿಮಾ. ಇದಕ್ಕೂ ಮೊದಲು ಅವರು ರಾಜಹಂಸ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದು, ಅದಿನ್ನೂ ಬಿಡುಗಡೆಯಾಗಬೇಕಿದೆ. ಅದಕ್ಕೂ ಮೊದಲು ಎರಡನೇ ಸಿನಿಮಾಗೆ ನಾಯಕಿಯಾಗಿದ್ದಾರೆ ರಂಜಿನಿ.

ಸುಬ್ಬ ಚಿತ್ರ ನಿರ್ದೇಶಕ ಚರಣ್ ರಾಜ್ ಗೆ ಇದು ಮೊದಲ ಸಿನಿಮಾ. ಚಿತ್ರದ ಮುಹೂರ್ತ ನೆರವೇರಿದ್ದು, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಕ್ಯಾಮರಾ ಆನ್ ಮಾಡಿದರು. ಈ ಸಂದರ್ಭದಲ್ಲಿ ಅನೂಪ್ ತಂದೆ ಸಾ ರಾ ಗೋವಿಂದು ಮತ್ತಿತು ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾ ಚೋಪ್ರಾ ಪಂಜಾಬಿ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ