Select Your Language

Notifications

webdunia
webdunia
webdunia
webdunia

ರನ್ ಆಂಟೋನಿ ಸಿನಿಮಾಕ್ಕೆ ಪುನೀತ್ ರಾಜ್ ಕುಮಾರ್ ಕಂಠಸಿರಿ

ರನ್ ಆಂಟೋನಿ ಸಿನಿಮಾಕ್ಕೆ ಪುನೀತ್ ರಾಜ್ ಕುಮಾರ್ ಕಂಠಸಿರಿ
ಬೆಂಗಳೂರು , ಶನಿವಾರ, 23 ಜನವರಿ 2016 (14:00 IST)
ರಾಜ್ ಕುಮಾರ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ತಮ್ಮ ಸಿದ್ಧಾರ್ಥ್ ಸಿನಿಮಾದ ಅಭಿನಯದ ಮೂಲಕ ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸಿದ್ರು. ಇದೀಗ ವಿನಯ್ ರಾಜ್ ಕುಮಾರ್ ತಮ್ಮ ಎರಡನೇ ಸಿನಿಮಾ ರನ್ ಆಂಟೋನಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಕ್ಕೆ ವಿನ. ಚಿಕ್ಕಪ್ಪ ಪುಲೀತ್ ರಾಜ್ ಕುಮಾರ್ ಕೂಡ ತಮ್ಮದೊಂದು ಪುಚ್ಚ ಕಾಣಿಕೆ ನೀಡಿದ್ದಾರಂತೆ.
 
  ಹೌದು... ಸಿನಿಮಾದಲ್ಲಿ  ಒಂದು ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡುತ್ತಿದ್ದಾರಂತೆ.ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರು ಸಂಯೋಜಿಸಿರುವ ಹಾಡೊಂದನ್ನು ಪುನೀತ್ ಹಾಡಲಿದ್ದಾರಂತೆ.ಆ ಮೂಲಕ ವಿನಯ್ ರಾಜ್ ಕುಮಾರ್ ಸಿನಿಮಾಗೆ ಬೆಂಬಲ ನೀಡುತ್ತಿದ್ದಾರೆ ಪುನೀತ್. ಇದು ವಿನಯ್ ಗೂ ತುಂಬಾನೇ ಖುಷಿ ನೀಡಿದೆಯಂತೆ.ಇನ್ನು ಮೊನ್ನೆಯಷ್ಟೇ ವಿನಯ್ ಪೋಷಕರು ಕೂಡ ಸಿನಿಮಾ ಶೂಟಿಂಗ್ ಸ್ಥಳಕ್ಕೆ ಹೋಗಿ ಮಗನಿಗೆ ಬೆಂಬಲಿಸಿ ಬಂದಿದ್ದರು.
 
ಇನ್ನು ಬೆಂಗಳೂರಿನ ವಿವಿಧ ಲೊಕೇಶನ್‌ಗಳಲ್ಲಿ ಶೂಟಿಂಗ್ ನಡೀತಾ ಇರೋ ಈ ಚಿತ್ರ ಈಗಾಗ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣವಾಗ್ತಿರೋ 'ರನ್ ಆ್ಯಂಟನಿ' ನಿರ್ದೇಶಕ ರಘು ಶಾಸ್ತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.
 

Share this Story:

Follow Webdunia kannada