Select Your Language

Notifications

webdunia
webdunia
webdunia
webdunia

'ರಾಕೆಟ್'ನಲ್ಲಿ ಪುನೀತ್ ರಾಜ್‌ಕುಮಾರ್ ಕಂಠಸಿರಿ

'ರಾಕೆಟ್'ನಲ್ಲಿ ಪುನೀತ್ ರಾಜ್‌ಕುಮಾರ್ ಕಂಠಸಿರಿ
, ಗುರುವಾರ, 2 ಜುಲೈ 2015 (10:01 IST)
ಸ್ಯಾಂಡಲ್ ವುಡ್ ನಲ್ಲಿ ಒಬ್ಬರ ಸಿನಿಮಾದಲ್ಲಿ ಇನ್ನೊಬ್ಬರು ನಟರು ಬಂದು ಹಾಡೋದು ಈಗ ಕಾಮನ್ ಆಗಿಬಿಟ್ಟಿದೆ. ಉಪೇಂದ್ರ, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಮುಂತಾದ ನಟರು ಈಗಾಗಲೇ ಬೇರೆ ಬೇರೆ ನಾಯಕ ನಟರ ಸಿನಿಮಾಗಳಲ್ಲಿ ತಮ್ಮ ಕಂಠಸಿರಿ ತೋರಿಸಿದ್ದಾರೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಗೆ ಮೊದಲ ಸ್ಥಾನ. ಪುನೀತ್ ಬೇರೆ ಸಿನಿಮಾಗಳಲ್ಲಿ ಹಾಡೋದು ಈಗ ಕಾಮನ್ ಆಗಿ ಬಿಟ್ಟಿದೆ.
ಅದರಂತೆ ಇದೀಗ ನಟ ನೀನಾಸಂ ಸತೀಶ್ ಹೋಮ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ರಾಕೆಟ್ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ. ತಣ್ಣಗೆ ಇದ್ದೀವಿ ಅನ್ನುವ ಹಾಡನ್ನು ಪುನೀತ್ ಹಾಡಿದ್ದಾರೆ. ಇನ್ನು ಪುನೀತ್ ಹಾಡು ಹಾಡುತ್ತಿರುವ ವಿಡಿಯೋ ಈಗಾಗಲೇ ರಿಲೀಸ್ ಆಗಿದ್ದು, ಹಾಡನ್ನು ಪುನೀತ್ ತುಂಬಾನೇ  ಎಂಜಾಯ್ ಮಾಡುತ್ತಾ ಹಾಡುತ್ತಿರುವುದು ವಿಡಿಯೋ ನೋಡಿದ್ರೇನೆ ಗೊತ್ತಾಗುತ್ತೆ. ಇನ್ನು ಹಾಡಿನಲ್ಲಿ ಪುನೀತ್ ಗೆ ನಾಯಕಿ ಐಶಾನಿ ಶೆಟ್ಟಿ ಸಾಥ್ ನೀಡಿದ್ದಾರೆ.
 
ಸಿನಿಮಾದಲ್ಲಿ ನೀನಾಸಂ ಸತೀಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದರೆ, ಐಶಾನಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಆದ್ರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸತೀಶ್ ಎಲ್ಲೂ ಹೊರ ಹಾಕಿಲ್ಲ. ಈಗಾಗಲೇ ಚಿತ್ರತಂಡ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಆರಂಭಿಸಿದೆಯಂತೆ.

Share this Story:

Follow Webdunia kannada