Select Your Language

Notifications

webdunia
webdunia
webdunia
webdunia

ಪುನಿತ್ ಪಾಂಡವಪುರದಲ್ಲಿ ಒಡಿತಿದ್ದಾರೆ ಬೀಟ್...?!

ಪುನಿತ್ ಪಾಂಡವಪುರದಲ್ಲಿ ಒಡಿತಿದ್ದಾರೆ ಬೀಟ್...?!
, ಗುರುವಾರ, 2 ಏಪ್ರಿಲ್ 2015 (10:07 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ದೊಡ್ಡಮನೆ ಹುಡ್ಗ ಕೆಲಸ  ಆರಂಭವಾಗಿದೆ. ಅಜಯ್ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಗೋವಿಂದು ಅವರು ನಿರ್ಮಿಸುತ್ತಿರುವ ದೊಡ್ಮನೆ ಹುಡ್ಗ ಚಿತ್ರದ ಚಿತ್ರೀಕರಣ ಪಾಂಡವಪುರದ ಸುತ್ತಮುತ್ತ ಬಿರುಸಿನಿಂದ ನಡೆಯುತ್ತಿದೆ. ಚಿತ್ರವನ್ನು ಸೂರಿ ನಿರ್ದೇಶಿಸುತ್ತಿರುವ ಈ ಚಿತ್ರದ ಕಥೆಯನ್ನು ಸೂರಿ ಹಾಗೂ ವಿಕಾಸ್ ಅವರು ಬರೆದಿದ್ದಾರೆ. ಸೂರಿ  ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು.ಎಸ್.ಕುಮಾರ್ ಸಂಕಲನ, ಶಶಿಧರ ಅಡಪ ಅವರ ಕಲಾ ನಿರ್ದೇಶನವಿದೆ.  
ರೆಬಲ್ ಸ್ಟಾರ್ ಅಂಬರೀಶ್, ಪುನೀತ್ ರಾಜ್ ಕುಮಾರ್, ಸುಮಲತ ಅಂಬರೀಶ್, ಭಾರತಿ ವಿಷ್ಣುವರ್ಧನ್, ರಾಧಿಕಾ ಪಂಡಿತ್, ಶ್ರೀನಿವಾಸಮೂರ್ತಿ, ಅವಿನಾಶ್, ರಂಗಾಯಣ ರಘು, ರವಿಶಂಕರ್, ಉದಯ್, ಚಿಕ್ಕಣ್ಣ, ಸಂತೋಷ್ ರಾಜವರ್ಧನ ಮುಂತಾದವರು ದೊಡ್ಡಮನೆ ಹುಡುಗನ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

Share this Story:

Follow Webdunia kannada