Select Your Language

Notifications

webdunia
webdunia
webdunia
webdunia

ಕೃಷ್ಣ ಲೀಲಾದಲ್ಲಿ ಪುನೀತ್ ರಾಜ್ ಕುಮಾರ್ ಗಾನ ಲೀಲಾ

ಕೃಷ್ಣ ಲೀಲಾದಲ್ಲಿ ಪುನೀತ್ ರಾಜ್ ಕುಮಾರ್ ಗಾನ ಲೀಲಾ
ಬೆಂಗಳೂರು , ಶನಿವಾರ, 25 ಅಕ್ಟೋಬರ್ 2014 (12:52 IST)
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅವರು ಮತ್ತೊಂದು ಚಿತ್ರದಲ್ಲಿ ಹಾಡಿದ್ದಾರೆ. ಶ್ರೀ ಕೃಷ್ಣ  ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಕೃಷ್ಣ ಅಜಯ್ ರಾವ್ ಅವರ ನಟನೆಯ ಚಿತ್ರದಲ್ಲಿ ಹಾಡಿದ್ದಾರೆ ಪುನೀತ್ ರಾಜ್ ಕುಮಾರ್. ಈ ಚಿತ್ರವನ್ನು ಶಶಾಂಕ್ ಅವರು ನಿರ್ದೇಶಿಸಿದ್ದಾರೆ.  
 
ಕೃಷ್ಣ ಲೀಲ ಚಿತ್ರ ಶೂಟಿಂಗ್ ಈಗ ಬಹುತೇಕ ಪೂರ್ಣಗೊಂಡಿದ್ದು, ಪುನೀತ್ ಹಾಡಿರುವ ಹಾಡನ್ನು ಆಕಾಶ್ ಸ್ಟುಡಿಯೋ ದಲ್ಲಿ ಮುದ್ರಿಸಲಾಯಿತು. ಪುನೀತ್ ರಾಜ್ ಕುಮಾರ್ ಹಾಡನ್ನು ಹಾಡುವ ಸಮಯದಲ್ಲಿ ರಾಘವೇಂದ್ರ ರಾಜ್ ಕುಮಾರ್ ಉಪಸ್ಥಿತರಿದ್ದರು. ಈ ಚಿತ್ರದಲ್ಲಿ ಆರು ಹಾಡುಗಳಿದ್ದು  ಆಡಿಯೋ ನವೆಂಬರ್  ಎರಡನೇ ವಾರದಲ್ಲಿ  ಬಿಡುಗಡೆ ಆಗುವ ಸಾಧ್ಯತೆ ಇದೆ. 
 
ಈ ಚಿತ್ರದಲ್ಲಿ ಮಯೂರಿ ಮುಖ್ಯ ಪಾತ್ರಧಾರಿಯಾಗಿದ್ದಾರೆ. ಕೃಷ್ಣ ಲೀಲಾ ಚಿತ್ರದ ನಿರ್ಮಾಣ ಅಜಯ್ ಕೃಷ್ಣ ರಾವ್ ಮಾಡಿದ್ದಾರೆ. ರಂಗಾಯಣ ರಘು, ಅಚ್ಯುತ್  ಕುಮಾರ್, ಶೋಭರಾಜ್, ತಬಲಾ ನಾಣಿ, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ.
 

Share this Story:

Follow Webdunia kannada