Select Your Language

Notifications

webdunia
webdunia
webdunia
webdunia

ಪುನೀತ್ ಪವರ್ ಡ್ಯಾನ್ಸ್‌ಗೆ ಮರುಳಾದ ಅದ ಶರ್ಮ

ಪುನೀತ್ ಪವರ್ ಡ್ಯಾನ್ಸ್‌ಗೆ ಮರುಳಾದ ಅದ ಶರ್ಮ
, ಶುಕ್ರವಾರ, 26 ಸೆಪ್ಟಂಬರ್ 2014 (10:14 IST)
ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅವರ ಪವರ್ ಚಿತ್ರ ಇತ್ತೀಚಿಗೆ ಬಿಡುಗಡೆಯಾಗಿ ಬಾಕ್ಸಾಫೀಸ್‌ಲ್ಲಿ ಕೊಳ್ಳೆ ಹೊಡೆದದ್ದು ಸತ್ಯ. ಪುನೀತ್ ಜೊತೆ ಅನೇಕ ಬೇರೆ ಭಾಷೆಯ ನಟಿಯರು ಅಭಿನಯಿಸಿರೋದು ಎಲ್ಲರಿಗೂ ತಿಳಿದೇ ಇದೆ.. ಕನ್ನಡದ ಹುಡುಗೀರಲ್ಲದೆ ಬೇರೆ ಭಾಷೆಯ ಹೆಣ್ಣುಮಕ್ಕಳು ಸಹಿತ ಇಷ್ಟ ಪಡುವಂತಹ ಹೀರೋ ಪುನೀತ್. ಈ ನಟನ ಡ್ಯಾನ್ಸ್  ಬಗ್ಗೆ ಬಾಲಿವುಡ್ ಹೀರೋಯಿನ್ ಗಳು ಸಹಿತ ತುಂಬಾ ಇಷ್ಟ ಪಟ್ಟಿದ್ದಾರೆ.

ಅವರಲ್ಲಿ ಅದ ಶರ್ಮ ಸಹಿತ ಒಬ್ಬಳು. ಆಕೆಯು ಪವರ್ ಚಿತ್ರದಲ್ಲಿ ಪುನೀತ್ ಮಾಡಿರುವ ಡ್ಯಾನ್ಸ್, ಆ ಸ್ಟೆಪ್ಸ್ ಗೆ ಮರುಳಾಗಿ ಪುನೀತ್ ಪವರ್ ಚಿತ್ರದಲ್ಲಿ ಡ್ಯಾನ್ಸ್ ಸಕತ್ತಾಗಿ ಡ್ಯಾನ್ಸ್ ಮಾಡಿದ್ದಾರೆ.. ಆಹಾ ಎಷ್ಟು ಚಂದ ಇದೆ ಸ್ಟೆಪ್ಸ್, ನಾನು ಆತನ ಡ್ಯಾನ್ಸ್ ಗೆ ಫ್ಲಾಟ್ ಆಗಿ ಬಿಟ್ಟಿದ್ದೇನೆ ಎಂದು ಹಾಡಿ ಹೊಗಳಿದ್ದಾಳೆ . ಇದೆ ವಿಷಯದಲ್ಲಿ ನೀತು ಚಂದ್ರ ಸಹಿತ ಹಿಂದೆ ಉಳಿದಿಲ್ಲ. ಕನ್ನಡದ ಸೂಪರ್ ಸ್ಟಾರ್ , ಪವರ್ ಸ್ಟಾರ್ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಟ್ವೀಟ್ ಮೂಲಕ  ಹೇಳಿದ್ದಾಳೆ.ಪುನೀತ್ ಈ ಪರಿ ಹಿಂದಿ ಅಮ್ಮಣ್ಣಿಗಳ ಗಮನ ಸೆಳೆಯುತ್ತಿರುವುದು ಅತ್ಯಂತ ಖುಷಿಯ ಸಂಗತಿ.

Share this Story:

Follow Webdunia kannada