Select Your Language

Notifications

webdunia
webdunia
webdunia
webdunia

ಏಪ್ರಿಲ್ 25 ಸೆಟ್ಟೇರುತ್ತಿರುವ ಪುನೀತ್ ರಾಜ್ ಕುಮಾರ್ ನಟನೆಯ ಹೊಸ ಚಿತ್ರ

ಏಪ್ರಿಲ್ 25 ಸೆಟ್ಟೇರುತ್ತಿರುವ ಪುನೀತ್ ರಾಜ್ ಕುಮಾರ್ ನಟನೆಯ ಹೊಸ  ಚಿತ್ರ
, ಮಂಗಳವಾರ, 21 ಏಪ್ರಿಲ್ 2015 (10:59 IST)
ತಮಿಳು ನಿರ್ದೇಶಕ ಎಂ ಸರವಣನ್ ಅವರ ನಿರ್ದೇಶನದ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಏಪ್ರಿಲ್ 25 ರಂದು ಲಾಂಚ್ ಆಗಲಿದೆ. ಡಾ.ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬದ ನಂತರ ಈ ಒಂದು ಚಿತ್ರ ಸೆಟ್ಟೇರಲಿದೆ. ಈ ಸಿನಿಮಾಕ್ಕೆ ಇನ್ನು ಶೀರ್ಷಿಕೆ ನಿಕ್ಕಿಯಾಗಿಲ್ಲ. ಇದನ್ನು ರಾಜಕೀಯ ಧುರೀಣ ಬಿ ರಘುಪತಿ ಅವರ ಮೊಮ್ಮಗ ಲೋಹಿತ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ನೈಜ ಕಥೆಯನ್ನು ಆಧರಿಸಿರುವ ಚಿತ್ರವಾಗಿದೆಯಂತೆ.

ಸರವಣ ನಿರ್ದೇಶನದ ತಮಿಳು ಚಿತ್ರ ವಲಿಯವನ್ ಇತ್ತೀಚಿಗೆ ಬಿಡುಗಡೆ ಆಯಿತಾದರೂ ಅದು ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯಲಿಲ್ಲ. ಪುನೀತ್ ಅದನ್ನೇ ಮುಂದಿಟ್ಟುಕೊಂಡು ಅವರಿಗೆ ಅವಕಾಶ ನೀಡದೆ ಇರಬಹುದಿತ್ತು, ಆದರೆ ಪವರ್ ಸ್ಟಾರ್ ಹಾಗೆ ಮಾಡದೆ ತಮ್ಮ ಚಿತ್ರ ನಿರ್ದೇಶಿಸುವ ಅವಕಾಶ ನೀಡಿದ್ದಾರೆ.  ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ರಣವಿಕ್ರಮ ಬಿಡುಗಡೆ ಆಯಿತು. ಅದು ಅಭೂತಪೂರ್ವ ಯಶಸ್ಸು ಗಳಿಸಿತು. ಈಗ ಸೂರಿ ನಿರ್ದೇಶನದ ದೊಡ್ಡ ಮನೆ ಹುಡುಗ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ ಪುನೀತ್. 

Share this Story:

Follow Webdunia kannada