Select Your Language

Notifications

webdunia
webdunia
webdunia
webdunia

ಎಸ್.ನಾರಾಯಣ್ ಪಾಲಿಗೆ ವಿಜಯ್ ನಟನೆಯ ಪುಲಿ ಚಿತ್ರದ ಹಕ್ಕುಗಳು

ಎಸ್.ನಾರಾಯಣ್ ಪಾಲಿಗೆ ವಿಜಯ್ ನಟನೆಯ ಪುಲಿ ಚಿತ್ರದ ಹಕ್ಕುಗಳು
, ಸೋಮವಾರ, 27 ಜುಲೈ 2015 (10:32 IST)
ಒಂದು ಕಡೆ ಕನ್ನಡ ಚಿತ್ರಗಳಿಗೆ ಬೆಲೆ ಇಲ್ಲ ಕರ್ನಾಟಕದಲ್ಲಿ ಎಂದು ಕನ್ನಡ ಸಿನಿಮಾದವರೇ ಮಾಧ್ಯಮಗಳ ಮುಂದೆ ಗೋಳಾಟ ನಡೆಸುತ್ತಿದ್ದರೆ, ಮತ್ತೊಂದು ಕಡೆ ಅದೇ ಕನ್ನಡ ಚಿತ್ರರಂಗದವರು ಪರಭಾಷಾ ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಸಾಕಷ್ಟು ಸಿದ್ಧತೆ ನಡೆಸಿದ್ದಾರೆ. ಡಬ್ಬಿಂಗ್  ಬೇಡ ಎಂದು ಕೂಗಾಡುವ ಕನ್ನಡ ಸಿನಿಮಂದಿ ಮತ್ತೊಂದು ಕಡೆ ಬೇರೆ ಭಾಷೆಯ ಚಿತ್ರಗಳ ನಿರ್ಮಾಣಕ್ಕೆ ರಾಶಿ ರಾಶಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಇವೆಲ್ಲವೂ ಸಿನಿರಂಗದ ಒಳ ಜಗತ್ತು.. ಒಳಸುಳಿಗಳು!!
ಈಗ ಎಸ್ ನಾರಾಯಣ್ ಅವರು ವಿಜಯ್ ನಟನೆಯ ಪುಲಿ ಚಿತ್ರದ ಹಂಚಿಕೆ ಹಕ್ಕು ತಮ್ಮದಾಗಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಅಪರೂಪದ  ನಟ ನಿರ್ದೇಶಕ ಬಹುನಿರೀಕ್ಷಿತ ಚಿತ್ರ ಪುಲಿ ಹಕ್ಕು ತಮ್ಮ ಕೈವಶ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್ 17ಕ್ಕೆ ಬಿಡುಗಡೆ ಆಗುವ ಈ ಚಿತ್ರದ ಹಕ್ಕಿಗಾಗಿ ಸಾಕಷ್ಟು ಕಾಲದಿಂದ ಎಸ್ ನಾರಾಯಣ್ ಅವರು ಪ್ರಯತ್ನ ಮಾಡುತ್ತಿದ್ದು, ಈಗ ಸಫಲತೆ ಪಡೆದಿದ್ದಾರೆ. 
 
ಕೆಲವು ವರ್ಷಗಳ ಹಿಂದೆ ಎಸ್ ನಾರಾಯಣ್ ಅವರು ತಮಿಳು ಚಿತ್ರ ಜೈ ನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ  ಸುದೀಪ್ ನಾಯಕರಾಗಿದ್ದು. ಅದು ಈಗ ಪ್ರದರ್ಶನ ಕಾಣುವ ಸಿದ್ಧತೆಯಲ್ಲಿದೆ. ಇತ್ತೀಚೆಗೆ ಕನ್ನಡಿಗ ಹಂಚಿಕೆದಾರರು ತೆಲುಗು ಚಿತ್ರ ಬಾಹುಬಲಿಗೆ ಮಣೆ ಹಾಕಿದ್ದಾಯ್ತು. ಈಗ ತಮಿಳು ಚಿತ್ರದತ್ತ ದೃಷ್ಟಿ ಇಟ್ಟಿದ್ದಾರೆ. ಒಟ್ಟಾರೆ ಕನ್ನಡ ಚಿತ್ರಮಂದಿ ಕನ್ನಡ ವೀಕ್ಷಕರ ಮುಂದೆ ತಮಗೆ ಅನ್ಯಾಯ ಆಗ್ತಾ ಇದೆ ಎಂದು ಕಣ್ಣೀರು ಇಡುತ್ತಾ ಅವರ ಕಿವಿಗೆ ಲಾಲ್ ಬಾಗ್ ನ್ನು ಸಹಿತ ಇಡುತ್ತ  ಮತ್ತೊಂದು ಕಡೆ ಕನ್ನಡೇತರ ಚಿತ್ರಗಳನ್ನು ಬೆಳೆಸುತ್ತಿದ್ದಾರೆ. 

Share this Story:

Follow Webdunia kannada