Select Your Language

Notifications

webdunia
webdunia
webdunia
webdunia

ಡಬ್ಬಿಂಗ್ ವಿರೋಧಿಸಿ ಪ್ರತಿಭಟನೆ

ಡಬ್ಬಿಂಗ್ ವಿರೋಧಿಸಿ ಪ್ರತಿಭಟನೆ
, ಸೋಮವಾರ, 3 ಆಗಸ್ಟ್ 2015 (10:21 IST)
ಸ್ಯಾಂಡಲ್ ವುಡ್ ಅಂಗಳದಲ್ಲಿ ಮತ್ತೆ ಡಬ್ಬಿಗ್ ವಿರುದ್ಧ ಹೋರಾಟ ಶುರುವಾಗಿದೆ.  ಕಂಪಿಟೆಷನ್‌ ಕಮಿಷನ್‌ ಆಫ್‌ ಇಂಡಿಯಾ ನೀಡಿದ್ದ ತೀರ್ಪನ್ನು ಖಂಡಿಸಿ ನಿನ್ನೆ  ನಿರ್ದೇಶಕರ ಸಂಘ ಹಾಗೂ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ರು. 
ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ನಂತರ ಧರಣಿ ಪ್ರಾರಂಭಿಸಿದ ಸ್ಯಾಂಡಲ್ ವುಡ್ ಕಲಾವಿದರು, ನಿರ್ದೇಶಕರುಗಳು  ಕಪ್ಪು ಪಟ್ಟಿ ಧರಿಸಿ ರಾಜ್ ಸ್ಮಾರಕದ ಎದುರು ಮೌನ ಪ್ರತಿಭಟನೆ ನಡೆಸಿದ್ರು.  ನಿರ್ದೇಶಕರ ಪ್ರತಿಭಟನೆಗೆ ಕಿರುತೆರೆ ಕಲಾವಿದರು, ಚಲನಚಿತ್ರ ಕಾರ್ಮಿಕ ಒಕ್ಕೂಟದ ಸದಸ್ಯರು ಬೆಂಬಲ ನೀಡಿದರು. ಕರ್ನಾಟಕ ಚಲನಚಿತ್ರ ನಿರ್ದೇಶಕ ಸಂಘದ ಅಧ್ಯಕ್ಷ ಎಂ.ಎಸ್ ರಮೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರ್ದೇಶಕ ಪಿ.ಶೇಷಾದ್ರಿ, ಯೋಗೇಶ್ ಹುಣಸೂರು, ರವಿ ಶ್ರೀವತ್ಸ, ಡಾ. ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ ಗೋವಿಂದು, ಮಳವಳ್ಳಿ ಸಾಯಿಕೃಷ್ಣ, ಶರಣ್ ಭಾಗವಹಿಸಿದ್ರು. ಎಲ್ಲರೂ ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್‌ ಮಾಡುವುದನ್ನು ವಿರೋಧಿಸುವುದಾಗಿ ತಿಳಿಸಿದ್ರು.  
 
ನಂತರ ಉತ್ತರಹಳ್ಳಿಯಲ್ಲಿರುವ ವಿಷ್ಣುವರ್ಧನ್‌ ಸ್ಮಾರಕಕ್ಕೆ ತೆರಳಿದ ಪ್ರತಿಭಟನಾಕಾರರು ವಿಷ್ಣು ಸಮಾಧಿಗೆ ಪೂಜೆ ಸಲ್ಲಿಸಿದ್ರು. ಬಳಿಕ ಕನ್ನಡಕ್ಕೆ ಡಬ್ಬಿಂಗ್‌ ಏಕೆ ಬೇಡ ಅಂತಾ ಕೆಲವರ ಪ್ರಶ್ನೆಗಳಿಗೆ ಉತ್ತರಿಸಿರುವ ಕರಪತ್ರ ಹಂಚಿದ್ರು. ಇನ್ನು ಇತ್ತೀಚೆಗೆ ಸಿಸಿಐ ಡಬ್ಬಿಂಗ್‌ ವಿರೋಧಿಸಿದ್ದವರಿಗೆ 20 ಲಕ್ಷ ದಂಡ ವಿಧಿಸುವುದರರೊಂದಿಗೆ  ಬಿಸಿ ಮುಟ್ಟಿಸಿತ್ತು. ಆದ್ರೂ ನಿನ್ನೆ ನಿರ್ದೇಶಕರು ಮತ್ತು ಕಲಾವಿದರು ಡಬ್ಬಿಂಗ್‌ ವಿರೋಧಿಸಿ ಮೌನ ಪ್ರತಿಭಟನೆ ಮೂಲಕ ಸಮರ ಸಾರಿದ್ದಾರೆ. ಇನ್ನು ಆಗಸ್ಟ್‌ 8ರಂದು ಸಭೆ ಸೇರಿ ಮುಂದಿನ ನಿರ್ಣಯಕೈಗೊಳ್ಳಲು ನಿರ್ಧರಿಸಿದ್ದಾರೆ. 

Share this Story:

Follow Webdunia kannada