Select Your Language

Notifications

webdunia
webdunia
webdunia
webdunia

ಟಿವಿ ಷೋಗೆ ಗಾಯನ ಸುಧೆ ಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ

ಟಿವಿ ಷೋಗೆ ಗಾಯನ ಸುಧೆ ಹರಿಸುತ್ತಿರುವ ಪ್ರಿಯಾಂಕಾ ಚೋಪ್ರಾ
, ಬುಧವಾರ, 29 ಏಪ್ರಿಲ್ 2015 (10:14 IST)
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿರಂಗದಲ್ಲಿ ಹೇಳಿ ಕೊಳ್ಳುವಂತಹ ಅವಕಾಶಗಳನ್ನು ಪಡೆಯದೇ ಇದ್ದರೂ ಸಹ ಆಕೆಯ ಬಗ್ಗೆ ಜನಪ್ರಿಯತೆಯು ಕಡಿಮೆ ಆಗಿಲ್ಲ ಎನ್ನುವುದು ಸಹಿತ ಆಕೆಯ ವಿರೋಧಿಗಳು ಒಪ್ಪಲೇ ಬೇಕಾದ ಸಂಗತಿಯಾಗಿದೆ. ಪ್ರಿಯಾಂಕ ಕೇವಲ ನಟನೆಗೆ ಮಾತ್ರವಲ್ಲ ಹಾಡುವುದರ ಮೂಲಕವೂ ಸಹಿತ ತನ್ನ ಪ್ರತಿಭೆಯನ್ನು ಅನಾವರಣ ಮಾಡಿದ್ದಾಳೆ. ಆಕೆ ತಯಾರಿಸಿರುವ ಎಗ್ಜೋಟಿಕ್ ಆಲ್ಬಮ್ ಈ ಸಂಗತಿಯನ್ನು ಸಾಬೀತು ಮಾಡಿದೆ. ಸಮಯ ಸಿಕ್ಕಾಗಲೆಲ್ಲಾ ಆಕೆ ಹಾಡು ಹಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. 
ಈಗ ಆಕೆ ತಾನು ಅಭಿನಯಿಸುತ್ತಿರುವ ದಿಲ್ ಧಡಕ್ನೆ ದೋ ಚಿತ್ರದಲ್ಲಿ ಫರಾನ್ ಅಖ್ತರ್ ಜೊತೆ ಸೇರಿ ಪ್ರಿಯಾಂಕಾ ಹಾಡಿರುವ ಟೈಟಲ್ ಸಾಂಗ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದೆ. ಈ ಬಾರಿ ಆಕೆ ಟಿವಿ ಷೋಗೆಂದು ಹಾಡುತ್ತಿದ್ದಾಳೆ. ಅಮೆರಿಕನ್ ಟೀವಿ ಷೋ ಕ್ವಾಂಟಿಕೋ ದಲ್ಲಿ ಆಕೆ ನಟಿಸುತ್ತಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಈ ಷೋಗಾಗಿ ಆಕೆ ಸಿದ್ಧ ಮಾಡುತ್ತಿರುವ ಸಂಗೀತದ ಆಲ್ಬಮ್‌ನಲ್ಲಿ ಆಕೆಯ ಹಾಡುತ್ತಿದ್ದಾಳೆ. ಷೋ ಈ ಮೂಲಕ ಮತ್ತೊಮ್ಮೆ ಆಕೆಯು ತನ್ನ ಅಭಿಮಾನಿಗಳನ್ನು ಹಾಡಿನ ಮೂಲಕವೂ ರಂಜಿಸಲಿದ್ದಾಳೆ. 
 

Share this Story:

Follow Webdunia kannada