Select Your Language

Notifications

webdunia
webdunia
webdunia
webdunia

ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದಾಳೆ ಪ್ರಿಯಾಂಕ ಚೋಪ್ರಾ

ವಿಶ್ವ ಮಟ್ಟದಲ್ಲಿ ಮಿಂಚುತ್ತಿದ್ದಾಳೆ ಪ್ರಿಯಾಂಕ ಚೋಪ್ರಾ
, ಬುಧವಾರ, 30 ಸೆಪ್ಟಂಬರ್ 2015 (10:26 IST)
ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಛೋಪ್ರಾ ಇದೀಗ ಮತ್ತೊಮ್ಮೆ ಇಡೀ ಜಗತ್ತನ್ನು ತನ್ನತ್ತ ಸೆಳೆದುಕೊಳ್ಳಲು ರೆಡಿಯಾಗಿದ್ದಾಳೆ. ಪ್ರಿಯಾಂಕ ಅಭಿನಯಿಸಿರುವ ಅಮೇರಿಕನ್ ಟಿವಿ ಶೋ ಕ್ವಾಂಟಿಕೋ ಇನ್ನೇನು ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ.
ಕ್ವಾಂಟಿಕೋ ಕಾರ್ಯಕ್ರಮ ಮುಂದಿನ ತಿಂಗಳು ಅಂದರೆ ಅಕ್ಟೋಬಲ್ 3 ರಿಂದ ಪ್ರಸಾರವಾಗಲಿದೆ. ಉತ್ತರ ಅಮೇರಿಕಾದ ಟಿವಿಶೋ ಇದಾಗಿದ್ದು, ಪ್ರಿಯಾಂಕ ಇದರಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಸೆಕಾ ಪಾರೀಸ್ ಪಾತ್ರದಲ್ಲಿ ಪಿಗ್ಗಿ ನಟಿಸಿದ್ದಾರೆ. ಸ್ಟಾರ್ ವರ್ಡ್ ಇಂಡಿಯಾ ಚಾನೆಲ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
 
ಇನ್ನು ಪಿಗ್ಗಿ ಅಂತರಾಷ್ಟ್ರೀಯ ಮಟ್ಟದ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಬಾಲಿವುಡ್ ನ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಬಿಪಾಶಾ ಬಸು ಶುಭ ಹಾರೈಸಿದ್ದಾರೆ. ಬಿಪಾಶಾ ನೀನು ವಜ್ರದಂತೆ ಪ್ರಜ್ವಲಿಸು ಎಂದು ಪಿಗ್ಗಿಗೆ ಶುಭ ಹಾರೈಸಿದ್ದಾಳೆ. ಥ್ರಿಲ್ಲಿಂಗ್ ಕಹಾನಿಯನ್ನು ಒಳಗೊಂಡ ಈ ಶೋ ಪ್ರಿಯಾಂಕ ಛೋಪ್ರಾಗೆ ಎಷ್ಟರ ಮಟ್ಟಿಗೆ ಯಶಸ್ಸು ತಂದುಕೊಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
 

Share this Story:

Follow Webdunia kannada