Select Your Language

Notifications

webdunia
webdunia
webdunia
webdunia

ಹೊಸ ವಿವಾದಕ್ಕೆ ಸಿಲುಕಿದ ಪ್ರಿಯಾಮಣಿ

ಹೊಸ ವಿವಾದಕ್ಕೆ ಸಿಲುಕಿದ ಪ್ರಿಯಾಮಣಿ
, ಸೋಮವಾರ, 28 ಸೆಪ್ಟಂಬರ್ 2015 (10:39 IST)
ಕನ್ನಡತಿ, ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ ಮೂಲಕ ಮನೆ ಮಗಳಾದ ನಟಿ ಪ್ರಿಯಾಮಣಿ ಇದೀಗ ಹೊಸ ವಿವಾದವೊಂದನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಮಾದ್ಯಮ ವರದಿಗಾರನೊಬ್ಬನಿಗೆ ಕಪಾಳ ಮೋಕ್ಷ ಮಾಡಿ ಪ್ರಿಯಾ ಕುಟ್ಟಿ ಸುದ್ದಿಗೆ ಆಹಾರವಾಗಿದ್ದಾರೆ.
ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ , ವರದಿಗಾರರೊಬ್ಬರು ಪ್ರಿಯಾಮಣಿ ಬಳಿ ಸದ್ಯಕ್ಕೆ ನಿಮ್ಮ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲದಕ್ಕಾಗಿ ನೀವು ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತೀರಾ ಅಂತಾ ಪ್ರಶ್ನಿಸಿದ್ರಂತೆ. ಇದಕ್ಕೆ ಕೆರಳಿದ ಪ್ರಿಯಾಮಣಿ ತಾನು ಎಲ್ಲಿದ್ದೇನೆ ಎಂಬುವುದನ್ನು ನೋಡದೇ ವರದಿಗಾರನ ಕಪಾಳಕ್ಕೆ ಬಾರಿಸಿದ್ರಂತೆ.ಪ್ರಿಯಾಮಣಿ ನಡವಲಿಕೆ ನೋಡಿ ಅಲ್ಲಿದ್ದವರಿಗೂ ಅರೆಕ್ಷಣ ಏನು ಮಾಡಬೇಕು ಅನ್ನೋದೇ ಹೊಳಿಯಲಿಲ್ಲವಂತೆ.
 
ಪ್ರಿಯಾಮಣಿ ಈ ವರ್ತನೆ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದೆ. ಒಬ್ಬ ನಟಿ ಈ ರೀತಿ ಮಾಡೋದು ಎಷ್ಟು ಸರಿ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರಂತೆ. ಸದ್ಯ ಪ್ರಿಯಾಮಣಿ ದುನಿಯಾ ವಿಜಿ ಅವರ ಜೊತೆ ದನ ಕಾಯೋನು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
 
ಪ್ರಿಯಾಮಣಿ ಪಂಚಭಾಷ ತಾರೆ. ನಟಿಸಿದ ಪಾತ್ರಗಳೆಲ್ಲಾ ಪ್ರೇಕ್ಷಕನಿಗೆ ಥ್ರಿಲ್ ನೀಡಿವೆ. ತಮಿಳಿನ ಹೆಸರಾಂತ ನಿರ್ದೇಶಕ ಭಾರತೀರಾಜ್ ಅವರ ಕಂದಲಾಲ್ ಕೈದ ಸೈ ಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾದರು. ನಂತರ ತೆಲುಗು, ಮಲೆಯಾಳಂ, ಹಿಂದಿ, ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡರು. ತಮಿಳಿನ ಪರುಥಿ ವೀರನ್ ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರವನ್ನೂ ಪಡೆದ ಹೆಮ್ಮೆಯ ನಟಿ. ಆದರೆ ಇಷ್ಟೆಲ್ಲಾ ಟ್ಯಾಲೆಂಟ್ ಇದ್ದರೂ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಪಡೆದಿಲ್ಲ ಎಂಬುದು ಬೇಸರದ ಸಂಗತಿ.
 
ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡಾನ್ಸಿಂಗ್ ಸ್ಟಾರ್ ಜೂನಿಯರ್ ಕಾರ್ಯಕ್ರಮಕ್ಕೆ ನಟ ರವಿಚಂದ್ರನ್ ಹಾಗೂ ಮಯೂರಿ ಅವರೊಂದಿಗೆ ತೀರ್ಪುಗಾರರಾಗಿದ್ದ ಪ್ರಿಯಾಮಣಿ ಮುಂಬೈ ಮೂಲದ ಬ್ಯುಸಿನೆಸ್ ಮೆನ್ ಜೊತೆ ಮದುವೆಯಾಗುವ ಸುದ್ದಿ ಕೇಳಿಬಂದಿತ್ತು.

Share this Story:

Follow Webdunia kannada