Select Your Language

Notifications

webdunia
webdunia
webdunia
webdunia

ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಸೂಪರ್ ಹಿಟ್ ಆಗುತ್ತೆ: ನವಾಜುದ್ದೀನ್ ಸಿದ್ದಿಕಿ

ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಸೂಪರ್ ಹಿಟ್ ಆಗುತ್ತೆ: ನವಾಜುದ್ದೀನ್ ಸಿದ್ದಿಕಿ
, ಬುಧವಾರ, 7 ಅಕ್ಟೋಬರ್ 2015 (11:18 IST)
ಭಜರಂಗಿ ಭಾಯಿಜಾನ್ ಸಿನಿಮಾದ ಯಶಸ್ಸಿನ ನಂತರ ಸಲ್ಮಾನ್ ಖಾನ್ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಗಳು ಗರಿಗದರಿವೆ.
ಇನ್ನು ಸಿನಿಮಾದ ಟ್ರೇಲರ್ ವೀಕ್ಷಿಸಿರುವ ನಟ ನವಾಜುದ್ದೀನ್ ಸಿದ್ದಿಕಿ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಎಂದಿದ್ದಾರೆ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಟ್ರೇಲರ್ ನೋಡಿದ್ರೇನೇ ಸಿನಾಮ ಹಿಟ್ ಆಗೋ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ ಅಂತಾ ಅವರು ಹೇಳಿದ್ದಾರೆ. ನವಾಜುದ್ದೀನ್ ಈ ಹಿಂದೆ ಸಲ್ಲುರ ಕಿಕ್ ಹಗೂ ಭಜರಂಗಿ ಭಾಯಿಜಾನ್ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದರು.
 
ಸದ್ಯ ನವಾಜುದ್ದೀನ್ ಸಿದ್ದಿಕಿ ಅನುರಾಗ್ ಕಶ್ಯಪ್ ಅವರ ಸೈಕೋ ಥ್ರಿಲ್ಲರ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ನೈಜ ಕಥೆಯಾಧಾರಿತ ಸಿನಿಮಾ ಇದಾಗಿದ್ದು , ಚಿತ್ರದ ಕಥೆ ತುಂಬಾನೇ ಚೆನ್ನಾಗಿದೆ ಅಂತಾ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ.

Share this Story:

Follow Webdunia kannada